ಚಿಮ್ಮನಚೋಡ: ಪಂಚರತ್ನ ಯಾತ್ರೆ, ಡಾ.ಅಂಬೇಡ್ಕರ ಪ್ರತಿಮೆ ಅನಾವರಣ

ಚಿಂಚೋಳಿ,ಜ.11- ತಾಲ್ಲೂಕಿನಲ್ಲಿ ನಡೆದ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಚಿಮ್ಮನಚೋಡ ಗÁ್ರಮದಲ್ಲಿ ಜೆಡಿಎಸ್ ಅಭ್ಯರ್ಥಿ ಸಂಜೀವನ್ ಯಾಕಾಪೂರ ಅವರ ನೆರವಿನಿಂದ ನಿರ್ಮಾಣಗೊಳಿಸಲಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಯನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ.ಕುಮಾರಸ್ವಾಮಿ ಅವರು ಪುತ್ಥಳಿಯನ್ನು ಅನಾವರಣ ಗೊಳಿಸಿದರು.
ನಂತರ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈ ಪಂಚರತ್ನ ರಥಯಾತ್ರೆ ನನ್ನ ಸ್ವಾರ್ಥಕ್ಕಾಗಿ ಅಲ್ಲ, ಜನರ ಹಿತಕ್ಕಾಗಿದೆ ಎಂದರು.
ಜೆಡಿಎಸ್ ಪಕ್ಷ ಸ್ವತಂತ್ರ ಸರ್ಕಾರ ರಚನೆಗೆ ಅವಕಾಶ ಮಾಡಿ ಕೊಡುವಂತೆ ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಒಂದು ಬಾರಿ ಜೆಡಿಎಸ್‍ಗೆ ಸ್ವತಂತ್ರ್ಯ ವಾಗಿ ಸರ್ಕಾರಕ್ಕೆ ರಚನೆಗೆ ಅವಕಾಶ ನೀಡಿದರೆ ಪಂಚರತ್ನ ಯೋಜನೆ ಜಾರಿಗೆ ತರುತ್ತೆವೆ. ಅಧಿಕಾರ ಕೊಟ್ಟ ಕೇವಲ 24 ಗಂಟೆಗಳಲ್ಲಿ ಸ್ತ್ರೀ ಶಕ್ತಿ ಸಾಲ ಮನ್ನಾ. ಹಾಗೆ ವಯಸ್ಕರಿಗೆ 5000, ವಿದಿವೆಯರಿಗೆ 1500 ವಿಕಲಚೇತನರಿಗೆ 2500 ಮಾಶಾಸನ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಂಜೀವನ್ ಆರ್ ಯಾಕಾಪೂರ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಬಂಡೆಪ್ಪ ಕಾಶಂಪುರ್, ಬೋಜೇಗೌಡ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಸುರೇಶ್ ಮಹಾಗವಕರ್ ಜಿಲ್ಲಾ ಅಧ್ಯಕ್ಷರು ಕಲ್ಬುರ್ಗಿ ಯುವ ಪ್ರಧಾನ ಕಾರ್ಯದರ್ಶಿ ರಾಹುಲ್ ಯಾಕಾಪೂರ, ಸೇರದಂತೆ ಕಾರ್ಯಕರ್ತರು ಭಾಗವಹಿಸಿದ್ದರು.