ಚಿಮ್ಮನಚೂಡ್: ಸಂಭ್ರಮದ ಶ್ರೀಕೃಷ್ಣಜನ್ಮಾಷ್ಟಮಿ

ಚಿಂಚೋಳಿ,ಸೆ.11- ತಾಲೂಕಿನ ಚಿಮ್ಮನಚೂಡ್ ಗ್ರಾಮದ ವಿಶ್ವಗಂಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಶಾಲೆಯ ಮಕ್ಕಳು ರಾಧಾಕೃಷ್ಣವೇಷ ಧರಿಸಿಕೊಂಡು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅಶ್ವಿನಿ ಪಾಟೀಲ್ , ಕಾರ್ಯಕ್ರಮದ ಅತಿಥಿಗಳಾಗಿ ವಿಶ್ವನಾಥರೆಡ್ಡಿ ಬಕ್ಕಾ, ರಾಜಶ್ರೀ ಪದ್ಮಕಾರ್ ಯಾದವ್, ಪುರಖಾನ, ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ರೇಶ್ಮಾ ರಾಜೇಂದ್ರ, ರವರು ಸೇರಿದಂತೆ ಅನೇಕರು ಶಾಲೆಯ ಸಿಬ್ಬಂದಿಗಳು ಮತ್ತು ಶಾಲೆ ಮಕ್ಕಳು ಉಪಸ್ಥಿತರಿದ್ದರು