ಚಿನ್ನ ಕದ್ದ ಕಳ್ಳನನ್ನು ಬಂಧಿಸಿದ ಪೊಲೀಸರು


ಸಿಂಧನೂರು.ನ.2- ಶಿಕ್ಷಕರ ಮನೆಯಲ್ಲಿ ಸಿನಿಮಯ ರೀತಿಯಲ್ಲಿ 130 ಗ್ರಾಮ ಚಿನ್ನ ಕದ್ದು ಪರಾರಿಯಾಗಿದ್ದ ಚಾಲಕ ಕಳ್ಳನನ್ನು ನಗರ ಠಾಣೆ ಪೊಲೀಸರು ಬಂದಿಸಿ ಚಿನ್ನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿ.ಎಸ್.ಪಿ ವಿಶ್ವನಾಥ ರಾವ್ ಕುಲಕರ್ಣಿ ತಿಳಿಸಿದರು.
ನಗರ ಠಾಣೆಯಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಬ್ರಾಹ್ಮಣರ ಓಣಿಯಲ್ಲಿ ಇರುವ ಶಿಕ್ಷಕರಾದ ಪ್ರಾಣೇಶ್‌ರಾವ್ 25-09-2020 ಸಂಜೆ 6 ಘಂಟೆ ಸುಮಾರಿಗೆ ಪಕ್ಕದಲ್ಲಿರುವ ತಂದೆ ಮನೆಗೆ ಹೋಗಿ ಬರುವಷ್ಟರಲ್ಲಿ ಖತರನಾಕ್ ಕಳ್ಳ ಮನೆಯ ಬೀಗ ಮುರಿದು ಮನೆಯಲ್ಲಿದ್ದ 130 ಗ್ರಾಮ ಚಿನ್ನ ಕದ್ದು ಪರಾರಿಯಾಗಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಕಳ್ಳನ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಹೆಚ್ಚುವರಿ ಎಸ್.ಪಿ ಶ್ರೀಹರಿ, ಡಿ.ಎಸ್.ಪಿ ವಿಶ್ವನಾಥ್ ರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ಸಿಪಿಐ ಜಿ.ಚಂದ್ರಶೇಖರ್ ನಾಯಕ, ಪಿಎಸ್ಐ ವಿಜಯಕೃಷ್ಣ ಸಿಬ್ಬಂದಿಗಳಾದ ಮೆಹಬೂಬ ಅಲಿ, ಅನಿಲ್ ಕುಮಾರ, ಸಂಗನಗೌಡ, ಆದಯ್ಯ, ಸುರೇಶ ರವರ ವಿಶೇಷ ತಂಡ ರಚಿಸಿ 1-11-2020 ರಂದು ಬೆಳಿಗ್ಗೆ 5-00 ಗಂಟೆ ಸುಮಾರಿಗೆ ನಗರದ ಗಂಗಾವತಿ ರಸ್ತೆಯಲ್ಲಿರುವ ರಿಲಾಯನ್ಸ್ ಪೆಟ್ರೋಲ್ ಬಂಕ್ ಹತ್ತಿರ ವ್ಯಕ್ತಿಯೊಬ್ಬ ಪೊಲೀಸರನ್ನು ಕಂಡು ಓಡಿ ಹೋಗುತ್ತಿದ್ದಾಗ ಅವನ ಬೆನ್ನು ಹತ್ತಿ ಇಡಿದು ವಿಚಾರಣೆ ಮಾಡಿದಾಗ 25-10-2020 ರಂದು ಶಿಕ್ಷಕ ಪ್ರಾಣೇಶ್ ಮನೆಯಲ್ಲಿ ಬಂಗಾರ ಕಳ್ಳತನ ಮಾಡಿದ ಬಗ್ಗೆ ಕಳ್ಳ ಬಡಿಗೇರ ಪಕೀರ ಒಪ್ಪಿಕೊಂಡಿದ್ದು ಕಳ್ಳನಿಂದ ರೂ.6.50 ಲಕ್ಷ ಬೆಲೆ ಬಾಳುವ 130 ಗ್ರಾಂ ಬಂಗಾರ ಆಭರಣಗಳನ್ನು ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿ.ಎಸ್.ಪಿ ವಿಶ್ವನಾಥ್ ರಾವ್ ಕುಲಕರ್ಣಿ ತಿಳಿಸಿದರು ಆರೋಪಿ ಬಡಿಗೇರ ಪಕೀರ 2008 ರಲ್ಲಿ ಕಳ್ಳತನ ಮಾಡಿದಾಗ ಪಿ.ಎಸ್.ಐ ಕರುಣೇಶಗೌಡ ಬಂದಿಸಿದ್ದರು, 2010 ರಲ್ಲಿ ಹಿಂದಿನ ಪಿ.ಎಸ್.ಐ ಜಿ.ಚಂದ್ರಶೇಖರ್ ನಾಯಕ ಬಂದಿಸಿದ್ದರು ಸದರಿ ಆರೋಪಿ ಪುನಃ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದಾನೆ ,ಸಿ.ಪಿ.ಐ ಜಿ.ಚಂದ್ರಶೇಖರ್ ನಾಯಕ , ನಗರ ಠಾಣೆ ಪಿ.ಎಸ್.ಐ ವಿಜಯಕೃಷ್ಣ ಪತ್ರಿಕೆ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು