ಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ತೋರಿದ ಸಾರಿಗೆ ಸಿಬ್ಬಂದಿ

ವಿಜಯಪುರ,ಆ 28: ಮಹಿಳಾ ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಕಳೆದುಕೊಂಡಿದ್ದ 5 ಗ್ರಾಂ ಚಿನ್ನಾಭರಣವನ್ನು ಮರಳಿಸುವ ಮೂಲಕ ಸರಕಾರಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ.
ಬೆಳಿಗ್ಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಮಹಿಳೆಗೆ ನಿರ್ವಾಹಕ ಶಿವಾನಂದ ಯಾಳವಾರ ಮತ್ತು ಚಾಲಕ ರಾಮಪ್ಪ ಕುಂದರಗಿ ಅವರು ಮಾಂಗಲ್ಯ ಸರ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಈ ಸಂದರ್ಭದಲ್ಲಿ ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ಅಧೀಕ್ಷಕರು ದೇವೇಂದ್ರ ಡಂಬಳ, ವಿಜಯಪುರ ನಗರದ ಗಾಂಧಿಚೌಕ್ ಪೆÇಲೀಸ್ ಠಾಣೆಯ ಸಿಬ್ಬಂದಿ, ಪೆÇಲೀಸ್ ಪೇದೆ ಬಿ. ಎಸ್. ಗವಿಮಠ ಮುಂತಾದವರು ಉಪಸ್ಥಿತರಿದ್ದರು.
ಘಟನೆಯ ಹಿನ್ನೆಲೆ
ಆ. 27 ರಂದು ರಾಯಚೂರು ಜಿಲ್ಲೆಯ ಮಾನ್ವಿಯಿಂದ ವಿಜಯಪುರಕ್ಕೆ ಹೊರಟಿದ್ದ ಸರಕಾರಿ ಬಸ್ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಬಸ್ ನಿಲ್ದಾಣಕ್ಕೆ ಬಂದಿದೆ. ಆಗ, ಈ ಬಸ್ಸಿನಲ್ಲಿ ಹತ್ತಿದ ವಿಜಯಪುರದ ಮಹಿಳೆ ನೂರಜಂಹಾ ಇನಾಮದಾರ ವಿಜಯಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆದರೆ, ಮನೆಗ ಹೋಗಿ ನೋಡಿದಾಗ ಕೊರಳಲ್ಲಿದ್ದ 5 ಗ್ರಾಂ ಮಾಂಗಲ್ಯ ಸರ ನಾಪತ್ತೆಯಾಗಿದೆ. ಹೀಗಾಗಿ ಬೆಳಿಗ್ಗೆ ಬಸ್ ನಿಲ್ದಾಮಕ್ಕೆ ಬಂದ ಮಹಿಳೆ ಮಾನ್ವಿ ಡಿಪೆÇೀಗೆ ಸೇರಿದ ಬಸ್ಸಿನ ನಿರ್ವಾಹಕ ಮತ್ತು ಚಾಲಕರ ಬಳಿ ತಾವು ಮಾಂಗಲ್ಯ ಸರ ಕಳೆದಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಪಂದಿಸಿದ ಬಸ್ಸಿನ ನಿರ್ವಾಹಕ ಮತ್ತು ಚಾಲಕರು ಮಹಿಳೆಯ ನೆರವಿಗೆ ಧಾವಿಸಿದ್ದು, ಬಸ್ ನಿಲ್ದಾಣದ ಅಧಿಕಾರಿಗಳಿಗೆ ಈ ವಿಷಯ ಗಮನಕ್ಕೆ ತಂದಿದ್ದಾರೆ. ಈ ಮಧ್ಯೆ, ಬಸ್ ನಿಲ್ದಾಣದ ಅಧಿಕಾರಿಗಳು ವಿಜಯಪುರ ನಗರದ ಗಾಂಧಿಚೌಕ್ ಪೆÇಲೀಸ್ ಠಾಣೆಯ ಸಿಬ್ಬಂದಿಯನ್ನು ಕರೆಯಿಸಿ ಅವರ ಸಮ್ಮುಖದಲ್ಲಿ ಮಹಿಳೆಗೆ ಮಾಂಗಲ್ಯ ಸರ ಹಿಂದಿರುಗಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮಾನ್ವಿ ಬಸ್ ಡಿಪೆÇೀದ ನಿರ್ವಾಹಕ ಶಿವಾನಂದ ಯಾಳವಾರ ಮತ್ತು ಚಾಲಕ ರಾಮಪ್ಪ ಕುಂದರಗಿ ಅವರ ಮಾನವೀಯತೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.