ಚಿನ್ನಾಭರಣ ಖರೀದಿಗೆ ಮುಗಿ ಬಿದ್ದ ಜನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.23: ಅಕ್ಷಯ ತೃತಿಯ ಹಿನ್ನಲೆಯಲ್ಲಿ  ನಗರದ ಚಿನ್ನಾಭರಣದ ಅಂಗಡಿಗಳಲ್ಲಿ ಇಂದು ಜನರಿಂದ ಚಿನ್ನಾಭರಣದ  ಖರೀದಿಯ ಭರಾಟೆ ಕಂಡು ಬಂತು.
ನಗರದ ಬಹುತೇಕ ಚಿಬ್ನಾಭರಣದ ಅಂಗಡಿಗಳಲ್ಲಿ ಚಿನ್ನ  ಖರೀದಿಸುವ ದೃಶ್ಯ ಸಾಮಾನ್ಯವಾಗಿತ್ತು. ಅದರಲ್ಲೂ ಮಹಿಳೆಯರು ಹೆಚ್ಚಾಗಿದ್ದರು. ಬೆಳಗ್ಗಿನಿಂದಲೇ ಈ ವ್ಯಾಪಾರ ವಹಿವಾಟ ನಡೆದಿತ್ತು.
ಅಕ್ಷಯ ತೃತಿಯ ದಿನವಾದ ಇಂದು ಚಿನ್ನ‌ ಖರೀದಿ ಮಾಡಿದರೆ  ವರ್ಷ ಪೂರ್ತಿ ಚಿಬ್ನ ಖರೀದಿಸು ಆರ್ಥಿಕ ಸಾಮರ್ಥ ಬರುತ್ತದೆಂಬ ನಂಬಿಕೆ. ಹಾಗಾಗಿ ಜನತೆ ಈ ದಿನ ಒಂದು ಗುಲಗುಂಜಿ ತೂಕದಷ್ಟಾದರೂ  ಚಿನ್ನ ಖರೀದಿಸುವ ಪರಿಪಾಠ ವಿದೆ.
ಹಣ ಇದ್ದವರು ಮೊದಲೇ ಖರೀದಿಸಿ ಇಂದು ಅಂಗಡಿಗೆ ಬಂದು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಕಾರಣ ಇಂದು ಚಿನ್ನದ  ಬೆಲೆ ತುಸು ಹೆಚ್ಚು ಎಂದು.
ನಗರದ ತೇರು ಬೀದಿಯ ವಿಕ್ರಂ ಜ್ಯುಯಲರ್ಸ್ ನಲ್ಲಿ ಜನತೆ ಚಿನ್ನಾಬವರಣ ಖರೀದಿಗೆ ತೊಡಗಿದ್ದರು. ಇಂದಿನ ವ್ಯಾಪಾರದ ಬಗ್ಗೆ ಅಂಗಡಿ ಮಾಲೀಕರು ಸಂತಸ ವ್ಯಕ್ತಪಡಿಸಿದರು.