ಚಿನ್ನಾಭರಣ ಕಳ್ಳತನ ಆರೋಪಿಗಳ ಬಂಧನ

ಬೀದರ. ಮೇ. 5: ಫೆಬ್ರವರಿ 10 ಮತ್ತು ಏಪ್ರಿಲ್ 26 ರಂದು ಚಿಟಗುಪ್ಪಾ ಠಾಣಾ ವ್ಯಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಕಳ್ಳತನ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.

ಚಿಟಗುಪ್ಪಾ ತಾಲ್ಲೂಕಿನ ವಳಖಿಂಡಿ ಗ್ರಾಮದಲ್ಲಿ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ಆರೋಪಿಗಳಿಂದ ಬಂಗಾರ ಆಭರಣಗಳಾದ 10 ಗ್ರಾಂ ಲಾಕೇಟ, 5 ಗ್ರಾಂ ಝುಮಕಾ, 5 ಗ್ರಾಂ ಅಸ್ಟಪೈಲಿ ಮಣಿಗಳು ಹಾಗೂ 5 ಗ್ರಾಂ ಸಣ್ಣ ಚಿನ್ನದ ಲಾಕೇಟ್ ವಶಪಡಿಸಿಕೊಂಡಿದೆ ಇವುಗಳ ಒಟ್ಟು ಮೌಲ್ಯ 75 ಸಾವಿರ ರೂಪಾಯಿಗಳಾಗಿವೆ.

ಇದೇ ತಾಲ್ಲೂಕು ವ್ಯಾಪ್ತಿಯ ಇಟಗಾ ಗ್ರಾಮದಲ್ಲಿ ನಡೆದು ಇನ್ನೋಂದು ಟ್ಯಾಕ್ಟರ ಟ್ರ್ಯಾಲಿ ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಗಳಿಂದ ಎರಡು ಟ್ರಾಕ್ಟರ ಟ್ರ್ಯಾಲಿಗಳು ಮತ್ತು ಕೃತ್ಯಕ್ಕೆ ಬಳಸಲಾದ ಒಂದು ಟ್ರಾಕ್ಟರ್, ಹಾಗೂ ಮೋಟಾರ ಸೈಕಲ್ ವಶಪಡಿಸಿಕೊಳ್ಳಲಾಗಿದೆ ಇದರ ಒಟ್ಟು ಮೌಲ್ಯ 5 ಲಕ್ಷ ರೂಪಾಗಳಾಗಿವೆ.

ಈ ಎರಡು ಕಳ್ಳತನ ಪ್ರಕರಣಗಳು ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದವು. ಇವುಗಳ ಪತ್ತೆಗೆ ಪೊಲೀಸ್ ಇಲಾಖೆಯು ಚಿಟಗುಪ್ಪಾ ಸಿಪಿಐ ಮಹೇಶಗೌಡ ಪಾಟೀಲ್, ಪಿಎಸ್‍ಐ ಮಹೇಂದ್ರಕುಮಾರ ನೇತೃತ್ವದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ರಚಿಸಿತು. ಈ ತಂಡವು ಪ್ರಕರಣ ಭೇದಿಸಿ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.