ಚಿನ್ನಾಭರಣ ಕಳುವು-ಅಂತರಾಜ್ಯ ಮಹಿಳಾ ಕಳ್ಳಿಯರ ಬಂಧನ

ಲಿಂಗಸುಗೂರು.ಏ.೦೨-ತಾಲೂಕಿನ ಅಮರೇಶ್ವರ ಜಾತ್ರೆಯಲ್ಲಿ ಸೇರುವ ಲಕ್ಷಾಂತರ ಭಕ್ತರ ಜನಜಂಗುಳಿಯಲ್ಲಿ ಮಹಿಳೆಯರ ಮಂಗಳಸೂತ್ರ, ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಮಹಾರಾಷ್ಟ್ರ ಮೂಲದ ಇರ್ವರು ಮಹಿಳಾ ಕಳ್ಳಿಯರನ್ನು ಲಿಂಗಸುಗೂರು ಠಾಣೆ ಪೊಲೀಸರ ತಂಡ ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದೆ.
ಬುಧವಾರ ಮಹಾದೇವಿ ಸೋಮಪ್ಪ ಕುಂಬಾರ್ ನೀಡಿದ ದೂರಿನನ್ವಯ ಆರೋಪಿಗಳ ಪತ್ತೆಗಾಗಿ ಎಸ್ಪಿ, ಎಎಸ್ಪಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರು, ಸಿಪಿಐ ರಮೇಶ ಕುಲಕರ್ಣಿ ನೇತೃತ್ವದ ವಿಶೇಷ ತಂಡ ರಚಿಸಲಾಗಿತ್ತು. ಎ.೧ ರಂದು ಬೆಳಗ್ಗೆ ಪಟ್ಟಣದ ಬೃಂದಾವನ ಹೋಟೆಲ್ ಬಳಿ ಇರ್ವರು ಮಹಿಳೆಯರು ಅನುಮಾನಾಸ್ಪದ ಮಹಿಳೆಯರನ್ನು ವಿಚಾರಣೆಗೆ ಒಳಪಡಿಸಿದಾಗ ಸೊಲ್ಲಾಪುರದ ಸರಿತಾ ಗಂಡಾ ದತ್ತಾ ಗಾಯಕವಾಡ (೪೦), ಸುನಿತಾ ಗಂಡ ಸಂತರಾಮ ಜಾಧವ್ (೪೨) ಇವರು ಅಮರೇಶ್ವರ ಜಾತ್ರೆಯಲ್ಲಿ ಮಹಿಳೆಯರ ಮಂಗಳಸೂತ್ರ, ಚೈನ್ ಸೇರಿ ೬೪ ಗ್ರಾಂ ಬಂಗಾರದ ಆಭರಣ (೩ ಲಕ್ಷ ರೂ.) ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಎಎಸ್‌ಐ ಗದ್ದೆಪ್ಪ, ಸಿಬ್ಬಂದಿಗಳಾದ ಶಿವಮೂರ್ತಿ, ಈರಣ್ಣ, ಶರಣಪ್ಪ ರಡ್ಡಿ, ಸುಷ್ಮಾ, ಶಶಿಕಲಾ, ಪರಶುರಾಮ, ನಾಗಾರ್ಜುನ ತಂಡದಲ್ಲಿದ್ದರು.