ಶಿವಮೊಗ್ಗ, ಮೇ 30: ಮನೆಯೊಂದರಲ್ಲಿ ನಡೆದಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಹಾಗೂ ನಗದು ಕಳವು ಪ್ರಕರಣವೊಂದನ್ನು, ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಪತ್ತೆ
ಹಚ್ಚಿದ್ದಾರೆ. ಕಳವು ಆರೋಪದ ಮೇರೆಗೆ ಮನೆಯ ಸೊಸೆ ಹಾಗೂ ಯುವಕನೋರ್ವನನ್ನುಬಂಧಿಸಿದ್ದಾರೆ!ಹೇಮಾವತಿ ಆರ್ (23) ಹಾಗೂ ಸತೀಶ್ (22) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಇವರಿಂದ 4.30 ಲಕ್ಷ ರೂ. ಮೌಲ್ಯದ 90 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 2050ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿಬಾಲರಾಜ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಮಂಜುನಾಥ್ ಬಿ, ಪಿಎಸ್ಐ ಗಳಾದರಾಜುರೆಡ್ಡಿ ಬೆನ್ನೂರು, ಕುಮಾರ್ ಕುರಗುಂದ,ಎಎಸ್ಐ ಮನೋಹರ್ ಸೇರಿದಂತೆ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ ಗಳಾದ ಕಿರಣ್ ಮೋರೆ,ಅರುಣ್ ಕುಮಾರ್, ಮೋಹನ್ ಕುಮಾರ್, ಕಾನ್ಸ್ಟೇಬಲ್ ಗಳಾದ ನಾಗಪ್ಪ, ಹರೀಶ್ ನಾಯ್ಕ್,ಲಂಕೇಶ್, ಕಾಂತರಾಜ್, ಅರಿಹಂತ್, ಹರೀಶ್, ಸಂತೋಷ್, ರಮೇಶ್, ಶಿವಕುಮಾರ್, ರಾಘವೇಂದ್ರ,ಜಯಪ್ಪರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆ ಹಿನ್ನಲೆ: 13-5-2023 ರಂದು ಗ್ರಾಮವೊಂದರ ಮಹಿಳೆಯೋರ್ವರು ತುಂಗಾನಗರ ಪೊಲೀಸ್ಠಾಣೆಗೆ ದೂರು ನೀಡಿ, ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದನ್ನುಕಳ್ಳರು ಅಪಹರಿಸಿದ್ದಾರೆ. ಹುಡುಕಿಕೊಡುವಂತೆ ಕೋರಿಕೊಂಡಿದ್ದರು.ನಿಗೂಢವಾಗಿದ್ದ ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ತನಿಖೆವೇಳೆ ವೃತ್ತಿಪರ ಚೋರರ ಕೃತ್ಯವಲ್ಲ, ಪರಿಚಯಸ್ಥರೇ ಭಾಗಿಯಾಗಿರುವ ಕೃತ್ಯವೆಂಬುವುದುಪೊಲೀಸರಿಗೆ ಮನವರಿಕೆಯಾಗಿದೆ.
ತನಿಖೆ ವೇಳೆ ಸದರಿ ಮನೆಯ ಸೊಸೆಯೇ, ಆಕೆಗೆ ಪರಿಚಯವಿದ್ದ ಅದೇ ಗ್ರಾಮದ ಯುವಕನ ಜೊತೆಸೇರಿ ಚಿನ್ನಾಭರಣ ಕಳವು ಮಾಡಿದ್ದು ಪೊಲೀಸರಿಗೆ ಗೊತ್ತಾಗಿದೆ. ತದನಂತರ ಇಬ್ಬರನ್ನು
ಬಂಧಿಸಿ, ಅವರು ಕಳವು ಮಾಡಿದ್ದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.