ಚಿನ್ನಾಪುರ ಶಾಲೆ:ಸ್ವಾತಂತ್ರ್ಯ ದಿನಾಚರಣೆ

ಕೋಲಾರ,ಆ.೧೯- ತಾಲೂಕಿನ ವಕ್ಕಲೇರಿ ಹೋಬಳಿಯ ಚಿನ್ನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೭೭ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ೩ನೇ ತರಗತಿ ವಿದ್ಯಾರ್ಥಿ ಯದುವರ್ದಿನಿ ಎಂ.ಎಸ್ ಕಿತ್ತೂರು ರಾಣಿ ಚನ್ನಮ್ಮ ಅವರ ಪಾತ್ರದಲ್ಲಿ, ಶ್ರೇಯಸ್ ಅಂಬೇಡ್ಕರ್ ಪಾತ್ರದಲ್ಲಿ, ಜೀವನ್ ಮಹಾತ್ಮಗಾಂಧಿಜಿ ಅವರ ಪಾತ್ರದಲ್ಲಿ, ಚಕ್ರವರ್ದಿನಿ ಎಂ.ಎಸ್ ಒನಕೆ ಓಬವ್ವ ಅವರ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ವಿಜಯಲಕ್ಷ್ಮಿ, ಲಕ್ಷ್ಮೀದೇವಿ, ಅಂಗನವಾಡಿ ಕಾರ್ಯಕರ್ತೆ ನಾಗಮ್ಮ, ತಮಟೆ ಕಲಾವಿದ ಜೆ.ಪಿಳ್ಳಪ್ಪ, ಗ್ರಾಮ ಪಂಚಾಯತಿ ಸದಸ್ಯೆ ಶ್ರೀದೇವಿ ಕೃಷ್ಣಮೂರ್ತಿ, ಗ್ರಾಮಸ್ಥರಾದ ಹೆಚ್.ಕೃಷ್ಣಪ್ಪ, ಮುನಿ ರಾಮಣ್ಣ, ಜೆ.ಕೃಷ್ಣಪ್ಪ, ಪೈಂಟರ್ ಸಿ.ನಾರಾಯಣಸ್ವಾಮಿ, ಕಲಾವಿದ ಪಿ.ವಿಜಯಕುಮಾರ್, ಮಂಜೇಗೌಡ, ಗೌತಮ್ ಉಪಸ್ಥಿತರಿದ್ದರು.