ಚಿನ್ನದ ವ್ಯಾಪಾರಿ ಬೆದರಿಸಿ, ಸುಲಿಗೆ : ಮೂವರು ಸೆರೆ

ಬೆಂಗಳೂರು,ಮಾ.೨೩-ನಡೆದುಕೊಂಡು ಹೋಗುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಬೆದರಿಸಿ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದ ಮೂವರನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ,ಹಳ್ಳಿಯ ಪಿಳ್ಳಣ್ಣ ಗಾರ್ಡನ್ ನ ಜಾಕೀರ್ ಹುಸೇನ್ (೩೦)ವೆಂಕಟೇಶ್‌ಪುರಂನ ಶಾಬಾಜ್ ಖಾನ್ ( ೨೫) ಹಾಗೂ ವೆಂಕಟೇಶ್‌ಪುರಂ ಮುಖ್ಯರಸ್ತೆಯ ಫಾಜಿಲ್, (೨೩)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ನರ್ಗತಪೇಟೆಯ ಚಿನ್ನದ ವ್ಯಾಪಾರಿ ತಪನ್ ಮಿರ್ಶಾ ಅವರು ಕಳೆದ ಮಾ.೧೩ ರಂದು ಸಂಜೆ ಭೈರವೇಶ್ವರನಗರ ೯ನೇ ಕ್ರಾಸ್‌ನಲ್ಲಿ ಹೋಗುತ್ತಿರುವಾಗ ಬಂಧಿತ ಜಾಕೀರ್ ಹುಸೇನ್ ಸೇರಿ ಮೂವರು ಸ್ಕೂಟರ್ ನಲ್ಲಿ ಪ್ರಾಣ ಬೆದರಿಕೆ ಹಾಕಿ ೩ ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ೩ ಸಾವಿರ ನಗದು ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿದ ಚಂದ್ರಾ ಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ಬ್ರಿಜೇಶ್ ಮ್ಯಾಥ್ಯೂ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ವಿಚಾರಣೆಯಲ್ಲಿ ದೂರು ನೀಡಿದ ಚಿನ್ನದ ವ್ಯಾಪಾರಿ ತಪನ್ ಮಿರ್ಶಾ ಗೆ ಚಂದ್ರಲೇಔಟ್ ನಲ್ಲಿ ಸ್ನೇಹಿತೆ ನಯನಾಳನ್ನು ನೋಡಿಕೊಂಡು ಹೋಗಲು ಬಂದಿದ್ದ.
ಮಿರ್ಶಾ ಬರುವ ವಿಷಯವನ್ನು ನಯನಾ ತನ್ನ ಸ್ನೇಹಿತೆ ರತ್ನಾ ಎಂಬಾಕೆ ತಿಳಿಸಿದ್ದು ಆಕೆಯ ಸ್ನೇಹಿತನಾದ ಬಂಧಿತ ಆರೋಪಿ ಜಾಕೀರ್ ಹುಸೇನ್ ಈ ವಿಷಯವನ್ನು ತಿಳಿಸಿ ಮಿರ್ಶಾ ಚಿನ್ನದ ವ್ಯಾಪಾರಿಯಾಗಿದ್ದು ಆತನ ಬಳಿ ಲಕ್ಷಾಂತರ ಮೌಲ್ಯದ ಆಭರಣಗಳಿವೆ ಕೆಲದಿನಗಳಲ್ಲಿ ಆತ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಭಾಗಿಯಾಗಲು ಹೋಗುವುದಾಗಿ ಎಂದು ಹೇಳಿದ್ದಾಳೆ.
ಚುನಾವಣೆಯಲ್ಲಿ ಭಾಗಿಯಾಗಲು ಹೋಗುವುದಲ್ಲದೇ ಸ್ನೇಹಿತೆಯನ್ನು ನೋಡಲು ಬಂದಿರುವುದರಿಂದ ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ಭಾವಿಸಲಾಗಿತ್ತು.
ಅದರಂತೆ ಸಂಚು ರೂಪಿಸಿ ಬಂಧಿತ ಇನ್ನಿಬ್ಬರ ಜೊತೆ ಸೇರಿ ಬೆದರಿಸಿ ಸುಲಿಗೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಬಂಧಿತರಿಂದ ೩ಲಕ್ಷ ಮೌಲ್ಯದ ೧೦೨.೩ ಗ್ರಾಂ ತೂಕದ ಚಿನ್ನಾಭರಣಗಳು ಕೃತ್ಯಕ್ಕೆ ಉಪಯೋಗಿಸಿದ ಸುಜುಕಿ ಆಕ್ಸೆಸ್ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.