ಚಿನ್ನದ ಪದಕ ಪಡೆದ ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ರವರಿಗೆ ಸನ್ಮಾನ

ಬೀದರ:ಜ.12:ಜಿಲ್ಲೆ ಹಿಂದುಳಿಯುವಿಕೆ ಎಂಬ ಅಪವಾದದಿಂದ ಇಂದು ಹಿಂದೆ ಸರಿಯುತ್ತಿದೆ. ನಮ್ಮಲ್ಲಿ ಪ್ರತಿಭೆಗಳಿಗೆ ಅವಕಾಶ ಸಿಕ್ಕರೆ ಸಾಧನೆಯ ಮೇರು ಪರ್ವತ ಮುಟ್ಟಬಹುದೆಂಬುವುದಕ್ಕೆ ಮಹೇಶ ನಗರದ ಬಡಾವಣೆಯ ಹಾಗೂ ಜನವಾಡ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಪಕರಾದ ಡಾ|| ಮಲ್ಲಿಕಾರ್ಜುನ ನಿಂಗದಳ್ಳಿ ಹಿಡಿದು ಕೈಗನ್ನಡಿಯಾಗಿದ್ದಾರೆಂದು ಬೀದರ ಜಿಲ್ಲೆಯ ಐಟಿಐ ನೋಡಲ್ ಅಧಿಕಾರಿಗಳಾದ ಶಿವಶಂಕರ ಟೋಕರೆ ನುಡಿದರು.

ನಗರದ ವಿಶೇಶ್ವರಯ್ಯ ಬಡಾವಣೆಯ ವಿಶ್ವರ ಬೋತಗಿಯವರ ಮನೆಯಲ್ಲಿ ವಚನ ವೈಭವ ಸಮಿತಿಯ 21 ನೇ ವರ್ಷದ ಸಾಮಾನ್ಯ ಸಭೆಯಲ್ಲಿ ಮೊನ್ನೆತಾನೆ ಕೃಷಿ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಸಮಾರಂಭದಲ್ಲಿ ಡಾ|| ಮಲ್ಲಿಕಾರ್ಜುನ ನಿಂಗದಳ್ಳಿ ರವರ ಠರಬುಜ್ ಸಂಶೋಧನ ಪ್ರಬಂಧ ಮಂಡನೆಗೆ ಕೃಷಿ ವಿಶ್ವವಿದ್ಯಾಲಯವು ಪಿ.ಹೆಚ್.ಡಿ. ಜೊತೆಗೆ ಚಿನ್ನದ ಪದಕ ದೊರೆತ್ತಿರುವುದು ವಚನ ವೈಭವ ಸಮಿತಿಗೆ ಇಡಿ ಜಿಲ್ಲೆಯ ರೈತಾಪಿ ಜನರಿಗೆ ಸಂತಸ ಉಂಟುಮಾಡಿದೆ ಎಂದು ಶಿವಶಂಕರ ಟೋಕರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷ ವಹಿಸಿದ ವಚನ ವೈಭವ ಸಮಿತಿ ಜಿಲ್ಲಾಧ್ಯಕ್ಷರಾದ ರೇವಣಪ್ಪ ಮೂಲಗೆ ಮಾತನಾಡಿ ನಮ್ಮ ಬಡಾವಣೆಯ ಲಿಂಗೈಕ್ಯ ಗುರುಶಾಂತಪ್ಪ ನಿಂಗದಳ್ಳಿ ಕೃಷಿ ಇಲಾಖೆಯ ಆಡಳಿತಾಧಿಕಾರಿಯಾಗಿ ಕಾಯ, ವಾಚ, ಮನಸಾದಿಂದ ಕರ್ತವ್ಯ ಮಾಡಿರುವ ಪ್ರಯುಕ್ತ ಅವರ ಮನೆಯ ಮೂರು ಮಕ್ಕಳು ಡಾ|| ಆಗಿದ್ದು ನಮಗೆಲ್ಲರಿಗೊಂದು ಮಾದರಿಯಾಗಿದೆ. ಡಾ|| ಮಲ್ಲಿಕಾರ್ಜುನ ನಿಂಗದಳ್ಳಿ ಮೊದಲು ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿಯಾಗಿ ಹುದ್ದೆಯಲ್ಲಿ ನೇಮಕಗೊಂಡಾಗ ಅನೇಕ ಸನ್ನಿವೇಶಗಳನ್ನು ವೀಕ್ಷಿಸಿ ಬೇಸತ್ತು ರಾಜನಾಮೆ ನೀಡಿ ಇಂದು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಪಕರ ಹುದ್ದೆಗೆ ಆಯ್ಕೆಗೊಂಡು ಜಿಲ್ಲೆಯ ಸಾವಿರಾರು ರೈತರ ಬಾಳಿಗೆ ಬೆಳಕನ್ನು ನೀಡಿ ಅವರ ಅನೇಕ ಕಷ್ಟ ನೋವುಗಳಿಗೆ ಸ್ಪಂಧಿಸುತ್ತಿರುವುದು ಹಿಡಿದ ಕೈಗನ್ನಡಿಯಾಗಿದೆ. ಕರೋನಾ ಕಂಟಕದ ಮಧ್ಯಯು ಅನೇಕ ಹಳ್ಳಿಗಳಿಗೆ ಡಾ|| ಮಲ್ಲಿಕಾರ್ಜುನ ನಿಂಗದಳ್ಳಿ ತೆರಳಿ ರೈತರ ಭಾವನೆಗಳಿಗೆ ಸ್ಪಂಧಿಸುತ್ತಿರುವುದರಲ್ಲದೆ ಇಂದು ಅವರಿಗೆ ಚಿನ್ನದ ಪದಕ ದೊರೆತಿದೆ ನಾವು ಆಶೆ, ಆಕಾಂಕ್ಷಗಳಿಗೆ ಸೀಮಿತಗೊಳ್ಳದೆ ನಿಸ್ವಾರ್ಥಿಯಾಗಿ ಸಮಯ ಪ್ರಜ್ಞೆಯಿಂದ ದುಡಿದರೆ ನಮ್ಮ ಮುಂದಿನ ಜೀವನಕ್ಕೆ ಅಕ್ಷಯಪಾತ್ರೆ ಸಿಗುವುದರಲ್ಲಿ ಎರಡು ಮಾತಿಲ್ಲವೆಂದು ನುಡಿದರು.

ಚಿನ್ನದ ಪದಕ ಪಡೆದ ಡಾ|| ಮಲ್ಲಿಕಾರ್ಜುನ ನಿಗಂದಳ್ಳಿ ಗೌರವ ಸನ್ಮಾನವನ್ನು ಸ್ವೀಕರಿಸಿ ನನ್ನ ಲಿಂಗೈಕ್ಯ ತಂದೆಯ ವಿಚಾರಗಳನ್ನು ನನ್ನ ಜೀವನದಲ್ಲಿ ತಕ್ಕ ಮಟ್ಟಿಗೆ ಅಳವಡಿಸಿಕೊಂಡು ಹೋಗುತ್ತಿದ್ದೇನೆ. ಅನೇಕ ಕೆಲಸದಲ್ಲಿ ಅಡೆತಡೆಗಳು ಬಂದರು ಶರಣರ ವಿಚಾರಧಾರೆ ನಮದಲ್ಲಿ ಸ್ಮರಿಸಿ ಮುನ್ನಡೆಯುತ್ತಿರುವದರಿಂದಲೆ ಇಂತಹ ಸಾಧನೆ ಮಾಡಲು ಅನುಕೂಲವಾಗಿದೆ. ಶರಣರ ಕಾಯಕ ಸಿದ್ಧಾಂತ ಜೀವನದಲ್ಲಿ ಅಳವಡಿಸಿಕೊಂಡಿದೆ ಆದರೆ ನಾವು ಗುರಿಯನ್ನು ತಲುಪಲು ಸಾಧ್ಯವೆಂದು ನುಡಿದರು. ಮೊದಲಿಗೆ

ವಿಶ್ವೇಶ್ವರ ನಗರದ ವೀರೂಪಾಕ್ಷ ದೇವರು ಪ್ರಾರ್ಥನೆ ಗೀತೆ ಹಾಡಿದರೆ, ಶಿವಕುಮಾರ ಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ವೀರಣ್ಣ ಮೊರಬ್ ಸ್ವಾಗತಿಸಿದರೆ, ಶ್ರೀಕಾಂತ ಲಕಶೆಟ್ಟಿ ನಿರೂಪಿಸಿದ ಕಾರ್ಯಕ್ರಮ ಈಶ್ವರ ಬೋತಗಿರವರು ವಂದಿಸಿದರು. ಈ ಅಭಿನಂದನಾ ಸಮಾರಂಭದಲ್ಲಿ ಘಾಳೆಪ್ಪಾ ಬಿರಾದಾರ, ವೀರಶೆಟ್ಟಿ ಚನ್ನಶೆಟ್ಟಿ, ಅಶೋಕ ಹೆಡಗಾಪೂರೆ, ಕಂಟೆಪ್ಪಾ ಎಣಕೆ ಮೂರೆ, ಶಂಕರೆಪ್ಪಾ ಬೂದರಾ, ಚಂದ್ರಶೇಖರ ಹೊಸದೊಡ್ಡೆ, ಅಶೋಕ ಗಂಧಿಗೂಡೆ ಮಹಾರಾಯದ ಬೆಟ್ಟದ, ಶಿವರಾಜ ಸ್ವಾಮಿ, ಕಲ್ಲಪ್ಪ ಮುಗಟೆ ಸೇರಿದಂತೆ, ಕೃಷಿ ನಗರ, ಆರ್.ವ್ಹಿ. ಬಿಡಪ್ಪ ಲೇಔಟ್, ಕೈಲಾಸ ನಗರ, ಅಲ್ಲಮ ಪ್ರಭು ನಗರ, ಮಹೇಶ ನಗರ ಬಡಾವಣೆಯ ನೂರಾರು ಶರಣ, ಶರಣಿಯರು ಪಾಲ್ಗೊಂಡಿದರು.