ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳು

ಕೋಲಾರ,ಮೇ.೭: ಸಹ್ಯಾದ್ರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಅಕ್ಷಯ, ಮೈನ ಮತ್ತು ರೂಹಿ ಸುಲ್ತಾನ ಎಂಬ ವಿದ್ಯಾರ್ಥಿಗಳು, ಬಿ.ಎಸ್ಸಿ ಪದವಿಯ ಭೌತ ರಸಾಯನಶಾಸ್ತ್ರ ವಿಷಯದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ ೫೬ನೇ ಘಟಿಕೋತ್ಸವದಲ್ಲಿ, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳಿಂದ ಚಿನ್ನದ ಪದಕಗಳನ್ನ ಪಡೆದರು.
ಸಂಸ್ಥೆ ಪ್ರಾರಂಭವಾದ ದಿನದಿಂದ ಪ್ರತಿ ಬಾರಿಯೂ ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಗಳಿಸುತ್ತಿದ್ದು, ಈ ಎಲ್ಲಾ ವಿಧ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎಂ. ಉದಯಕುಮಾರ್, ಸಹ್ಯಾದ್ರಿ ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಕೃಷ್ಣಪ್ಪ ಹಾಗೂ ಉಪನ್ಯಾಸಕ ಮಿತ್ರರು ಮತ್ತು ಸಿಬ್ಬಂದಿ ವರ್ಗದವರು ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.