ಚಿನ್ನದ ಪದಕ ಗಳಿಸಿದ ವಿಜಯನಗರ ಕುವರಿ ತಾಯಿಯ ಆಸೆಯೇ ಸ್ಪೂರ್ತಿಯೆಂದ ಲಾವಣ್ಯ

ಹೊಸಪೇಟೆ ಡಿ 31 : ವಿಜಯನಗರ ಮಹಾವಿದ್ಯಾಲಯದ ವಿದ್ಯಾರ್ಥಿನಿ ವೈ. ಲಾವಣ್ಯ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ೨೦೧೮-೧೯ನೇ ಸಾಲಿನ ಎಂ.ಕಾಂ. ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್ಗಳಿಸಿರುತ್ತಾರೆ,
ಮಂಗಳವಾರ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಚಿತ್ರಕಿ ತಿಪ್ಪಣ್ಣ ಸ್ಮರಣರ‍್ಥ, ಕೋಳೂರು ತಿಮ್ಮನಗೌಡ ಸ್ಮರಣರ‍್ಥ ಮತ್ತು ಪಯ್ಯವುಲ ರಾಮಕೃಷ್ಣಪ್ಪ ಸ್ಮರಣರ‍್ಥ ಮೂರು ಬಂಗಾರದ ಪದಕಗಳನ್ನು ಪಡೆದಿದ್ದು, ತಮ್ಮ ಯಶಸ್ಸಿನ ಬಗ್ಗೆ ಅಭಿಮಾನ, ಹೆಮ್ಮೆ ಪಡುತ್ತ, ವಿದ್ಯರ‍್ಥಿ ದೆಸೆಯಿಂದಲೂ ನನಗೆ ನನ್ನ ತಾಯಿಯೇ ಸ್ಪೂರ್ತಿಯಾಗಿದ್ದು, ಅವಿದ್ಯಾವಂತರಾಗಿದ್ದ ಅವರು ನನ್ನನ್ನು ವಿದ್ಯಾವಂತಳನ್ನಾಗಿ ಮಾಡಿಸುವ ಮಹಾದಾಸೆ ಹೊಂದಿದ್ದರು ಅದು ಇಂದು ನೆರವೇರಿದ್ದು ನನ್ನ ಈ ಸಾಧನೆಗೆ ಗ್ರಂಥಾಲಯದಲ್ಲಿ ನಿರಂತರ ಅಭ್ಯಾಸ ಹಾಗೂ ಹಿರಿಯ ಬೋಧಕ ಸಿಬ್ಬಂದಿಗಳೊಂದಿಗೆ ನಿರಂತರ ಅಧ್ಯಯನದ ಕುರಿತಾಗಿ ಸಂಪರ್ಕದಲ್ಲಿದ್ದುದೇ ಕಾರಣವಾಗಿತ್ತು ಎಂದಿದ್ದಾರೆ.
ಪದಕ ವಿಜೇತೆ ಲಾವಣ್ಯಗೆ ವೀ.ವಿ ಸಂಘ ಬಳ್ಳಾರಿಯ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು, ಅಜೀವ ಸದಸ್ಯರು, ಹಾಗೂ ವಿಜಯನಗರ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸಾಲಿ ಸಿದ್ದಯ್ಯ ಸ್ವಾಮಿ ಮತ್ತು ಸದಸ್ಯರು, ಪ್ರಾಚಾರ್ಯರಾದ ಡಾ.ವಿ.ಎಸ್.ಪ್ರಭಯ್ಯ ಸೇರಿದಂತೆ ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.