ಚಿನ್ನದ ಗಣಿಯಲ್ಲಿ ಭೂಕಂಪನ: ಸ್ಥಳೀಯರಲ್ಲಿ ಅತಂಕ

ಕೋಲಾರ,ಡಿ.೨೨: ಚಿನ್ನದ ಗಣಿ ಕೆಜಿಎಫ್ ನಗರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ನಗದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಸುಮಾರು ಮೂರು ಸೆಕೆಂಡುಗಳ ಕಾಲ ಚಿನ್ನದ ಗಣಿ ಪ್ರದೇಶದಲ್ಲಿ ಭೂಮಿ ಕಂಪಸಿದ ಅನುಭವವಾಗಿದೆ. ಇನ್ನು ಸುಮಾರು .೮.೩೭ ರಲ್ಲಿ ಕೆಜಿಎಫ್ ನಗರದಲ್ಲಿ ಭೂ ಕಂಪನವಾಗಿದೆ. ಇನ್ನು ಚಿನ್ನದ ಗಣಿ ಪ್ರದೇಶದಲ್ಲಿ ಸಾವಿರಾರು ಅಡಿ ಆಳವಿದೆ, ಸಧ್ಯ ಇದರಲ್ಲಿ ನೀರು ತುಂಬಿಕೊಂಡಿದ್ದು, ನೀರಿನ ಅಲೆಗಳಿಗೆ ಒಮ್ಮೆಲೆ ಜೋರಾಗಿ ಗಾಳಿ ಹೊರ ಬಂದಾಗ ಈ ಪ್ರದೇಶದಲ್ಲಿ ಕಂಪನವಾಗುವುದು ಸಹಜವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಂಪನವಾಗಿರಲಿಲ್ಲ. ಇನ್ನು ಭೂಮಿ ಕಂಪನದ ಅನುಭವವಾದಾಗ ಜನರಲ್ಲಿ ಕೊಂಚ ಗಾಬರಿಯಾಗಿದ್ದು ಯಾವುದೇ ಅನಾಹುತವಾಗಿಲ್ಲ. ಇನ್ನು ಕಂಪನಕ್ಕೆ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು ಕೆಳ ಬಿದ್ದಿವೆ. ಇದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.