ಚಿನ್ನದ ಗಣಿಯಲ್ಲಿ ಬಂಡೆ ಕುಸಿದು ಹಲವರ ಸಾವು

ಮಾಸ್ಕೋ, ಸೆ ೧೨ – ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್ ಕಾಂಗೋ)ದ ದಕ್ಷಿಣ ಕಿವು ಪ್ರಾಂತ್ಯದಲ್ಲಿನ ಚಿನ್ನದ ಗಣಿಯಲ್ಲಿ ಬಂಡೆಗಳು ಕುಸಿದ ಪರಿಣಾಮವಾಗಿ ಹತ್ತಾರು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
೭ ಸುರ್ ೭ ಮಾಧ್ಯಮವೊಂದರ ವರದಿಯಂತೆ ಕಮಿಟುಗಾ ಪಟ್ಟಣದಲ್ಲಿನ ಚಿನ್ನದ ಗಣಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಭಾರೀ ಮಳೆಯ ನಂತರ ಚಿನ್ನದ ಗಣಿಯ ಮೂರು ಪ್ರಮುಖ ಸುರಂಗಗಳಲ್ಲಿ ಬಂಡೆಗಳು ಕುಸಿದಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಕುಸಿದ ಸುರಂಗಗಳಲ್ಲಿ ೫೦ ಕ್ಕೂ ಹೆಚ್ಚು ಜನರಿದ್ದರು ಎಂದು ದುರಂತದಲ್ಲಿ ಪಾರಾದ ಕಾರ್ಮಿಕರೊಬ್ಬರು ತಿಳಿಸಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ