ಚಿನ್ನದ ಅಂಗಡಿ ಮಾಲೀಕನ ಪತ್ನಿ ಭೀಕರ ಕೊಲೆ

ಹಾಸನ, ಜು.29- ಚಿನ್ನದ ಅಂಗಡಿ ಮಾಲೀಕನ ಪತ್ನಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪೆನ್ಷನ್ ಮೊಹಲ್ಲಾ‌ ದಲ್ಲಿ ನಡೆದಿದೆ.
ಚಿನ್ನದ ಅಂಗಡಿ ಮಾಲೀಕ ಕುಮಾರ್ ಪತ್ನಿ ಮಂಜುಳ ಕೊಲೆಯಾದ ದುರ್ದೈವಿ.
ಮಂಜುಳಾ ಮನೆಯಲ್ಲಿ ಒಂಟಿಯಾಗಿದ್ದಾಗ ನುಗ್ಗಿದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಕಳ್ಳತನಕ್ಕೆ ಬಂದ ಕಿಡಿಗೇಡಿಗಳು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಕೊಲೆ ಸಂಬಂಧ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್, ಶ್ವಾನದಳ ಸಿಬ್ಬಂದಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.