ಚಿನ್ನದುಂಗುರ ಹಿಂದಿರುಗಿಸಿದ ವಿದ್ಯಾರ್ಥಿ

ಶಿವಮೊಗ್ಗ,ಜ.೧೩-ತನಗೆ ಸಿಕ್ಕಿದ್ದ, ಮುಖ್ಯೋಪಾಧ್ಯಾಯರು ಕಳೆದುಕೊಂಡಿದ್ದ ಬಂಗಾರದ ಉಂಗುರ ಹಿಂದಿರುಗಿಸಿ, ವಿದ್ಯಾರ್ಥಿಯೋರ್ವ ಪ್ರಾಮಾಣಿಕತೆ ಮೆರೆದ ಘಟನೆ ಶಿವಮೊಗ್ಗದ ಬಾಪೂಜಿ ನಗರದ ತುಂಗಾ ಪ್ರೌಢಶಾಲೆಯಲ್ಲಿ ನಡೆದಿದೆ.
೯ ನೇ ತರಗತಿ ವಿದ್ಯಾರ್ಥಿ ಫಯಾಜ್ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಯಾಗಿದ್ದಾನೆ. ಮುಖ್ಯೋಪಾಧ್ಯಾಯ ಹೆಚ್.ಸತ್ಯನಾರಾಯಣ್ ರವರು ಬುಧವಾರ ಬೈಕ್ ಚಾಲನೆ ಮಾಡುವ ವೇಳೆ, ೬೦ ಸಾವಿರ ರೂ.ಮೌಲ್ಯದ ಬಂಗಾರದ ಉಂಗುರವನ್ನು ಶಾಲೆಯಲ್ಲಿ ಕಳೆದುಕೊಂಡಿದ್ದರು.
ಗುರುವಾರ ಬೆಳಿಗ್ಗೆ ಈ ಉಂಗುರ ಫಯಾಜ್ ಗೆ ಸಿಕ್ಕಿದ್ದು, ಅದನ್ನು ಶಿಕ್ಷಕರಿಗೆ ಹಿಂದಿರುಗಿಸಿದ್ದ. ವಿದ್ಯಾರ್ಥಿ ಪ್ರಾಮಾಣಿಕತೆ ಮೆಚ್ಚಿ, ಶಿಕ್ಷಕರು ಆತನಿಗೆ ಬಹುಮಾನ ನೀಡಿ ಅಭಿನಂದಿಸಿದ್ದಾರೆ.