ಚಿನ್ನದಸರವನ್ನು ಕಳೆದುಕೊಂಡ ವ್ಯಕ್ತಿಗೆ ವಾಪಸ್ ಪ್ರಾಮಾಣಿಕತೆ ಮೆರೆದ ಬಿ.ಮಹೇಶ್‍ಕುಮಾರ್

ಚಾಮರಾಜನಗರ, ನ.05: ದಾರಿಯಲ್ಲಿ ಸಿಕ್ಕಿದ ಚಿನ್ನದ ಚೈನ್‍ನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.
ಚಾಮರಾಜನಗರದ ನ್ಯಾಯಾಲಯದ ರಸ್ತೆಯಲ್ಲಿ ನವಂಬರ್ 1 ರಂದು ಬೆಳಗಿನ ಸಮಯದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಟಿ.ವಿ.ಎಸ್. ಷೋರೂಂ ಮಾಲೀಕ ಹಾಗೂ ಮಚೆರ್ಂಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಬಿ. ಮಹೇಶ್‍ಕುಮಾರ್ ಅವರೇ ಚಿನ್ನದ ಚೈನ್ ಹಿಂತಿರುಗಿಸಿದ ವ್ಯಕ್ತಿ.
ಕೊಳ್ಳೇಗಾಲದ ಪಟ್ಟಣದ ಲಯನ್ಸ್ ಶಾಲೆ ಶಿಕ್ಷಕಿ ಉಮಾಶಂಕರಿ ರವರ ಪುತ್ರ ಚಿದಾನಂದ ಎಂಬ ಬಾಲಕ ಚಾಮರಾಜನಗರದಲ್ಲಿ ಕರಾಟೆ ಅಭ್ಯಾಸದ ವೇಳೆಯಲ್ಲಿ ಓಡುವಾಗ ಚಾಮರಾಜನಗರದ ಕೋರ್ಟ್ ರಸ್ತೆಯಲ್ಲಿ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಅದೇ ಸಮಯದಲ್ಲಿ ವಾಯುವಿಹಾರ ಮಾಡುತ್ತಿದ್ದ ಬಿ. ಮಹೇಶ್‍ಕುಮಾರ್ ರವರಿಗೆ ದಾರಿಯಲ್ಲಿ ಚಿನ್ನದ ಚೈನ್ ಸಿಕ್ಕಿತು. ಕೂಡಲೇ ದೊರೆತ ಚಿನ್ನದ ಸರವನ್ನು ಸುತ್ತಮುತ್ತಲು ನೋಡಿ ತಕ್ಷಣದಲ್ಲಿ ಯಾರು ವಾರಸದಾರರು ಇಲ್ಲದ ಕಾರಣ ಫೇಸ್‍ಬುಕ್‍ನಲ್ಲಿ ಸ್ನೇಹಿತರ ಖಾತೆಯಲ್ಲಿ ಅಪ್‍ಲೋಡ್ ಮಾಡಿದರು. ಇದನ್ನು ಫೇಸ್‍ಬುಕ್‍ನಲ್ಲಿ ಗಮನಿಸಿದ ಉಮಾಶಂಕರಿ ರವರು ಬಿ. ಮಹೇಶ್‍ಕುಮಾರ್ ರವರಿಗೆ ಕರೆ ಮಾಡಿದರು. ಕೂಡಲೇ ನಗರದ ಪಟ್ಟಣ ಪೋಲಿಸ್ ಠಾಣೆಗೆ ಆಗಮಿಸಿದ ಮಹೇಶ್‍ಕುಮಾರ್ ರವರು ಎಲ್ಲಾ ಆಧಾರಗಳನ್ನು ಪೋಲಿಸರು ಪರಿಶೀಲಿಸಿದ ನಂತರ ಚಿನ್ನದ ಸರವನ್ನು ಪೆÇೀಲಿಸ್ ವೃತ್ತ ನಿರಿಕ್ಷಕರಾದ ಬಿ.ಮಹೇಶ್ ಅವರ ಸಮ್ಮುಖದಲ್ಲಿ ಚಿನ್ನದ ಸರವನ್ನು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರದಿದ್ದಾರೆ.
ಈ ಸಂದರ್ಭಲ್ಲಿ ಮಚೆರ್ಂಟ್ ಸೌಹಾರ್ಧ ಕೋ-ಆಪರೇಟಿವ್ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಎ. ಜಯಸಿಂಹ ಮಾತನಾಡಿ, ಯಾವುದೇ ವಸ್ತುಗಳು ರಸ್ತೆಯಲ್ಲಿ ದೊರೆತರೆ ಆ ವಸ್ತುವನ್ನು ಪಕ್ಕದಲ್ಲಿ ಇರುವ ಪೆÇೀಲಿಸ್ ಠಾಣೆಗೆ ತಲುಪಿಸಿದರೆ. ಆ ವಸ್ತುವು ಕಳೆದು ಕೊಂಡವರ ಕೈಸೇರುತ್ತದೆ. ಬಿ.ಮಹೇಶ್‍ಕುಮಾರ್ ಅವರಿಗೆ ದೊರೆತ ಚಿನ್ನದ ಸರವನ್ನು ವಾರಸುದಾರರಿಗೆ ತಲುಪುವಂತೆ ಮಾಡಿದ್ದಾರೆ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೆÇೀಲಿಸ್ ಸಿಬಂದ್ದಿಗಳು ಮತ್ತು ಸಿ.ಎಂ.ವೆಂಕಟೇಶ್, ವಿಜಯ್‍ಕುಲಾಲ್, ಶಿವಣ್ಣ ಹಾಜರಿದ್ದರು.