ಚಿನಮಳ್ಳಿ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ

ಅಫಜಲಪುರ,ಜ.14-ತಾಲ್ಲೂಕಿನ ಚಿನಮಳ್ಳಿ ಗ್ರಾಮದ ಆರಾಧ್ಯ ದೈವ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜ. 14 ಮತ್ತು 15 ರಂದು ಜರುಗಲಿದೆ.
ಜ. 14.ರಂದು ಬೆಳಿಗ್ಗೆ 11 ಗಂಟೆಗೆ ಭೀಮಾನದಿಯಿಂದ 101 ಮುತೈದೆಯರ ಕುಂಭ ಮೇಳವನ್ನು ಡೊಳ್ಳು ಕುಣಿತ ಸಮೇತವಾಗಿ ಶ್ರೀ ಮಲ್ಲಿಕಾರ್ಜುನ ದೇವಾಲಯ ತಲುಪಲಿದೆ. ಸಂಜೆ 8 ಗಂಟೆಗೆ ಸಂಗೀತ ಕಾರ್ಯಕ್ರಮ ಹಾಗೂ ತೊಟ್ಟಿಲು ಹರಾಜು ಮಾಡಲಾಗುವುದು.
ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗಬೇಕೆಂದು ದೇವಸ್ಥಾನ ಕಮೀಟಿ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕರಾದ ಶರಣಬಸಪ್ಪ ಕಲಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.