ಚಿನಮಳ್ಳಿ ಮೈಲಾರಲಿಂಗನ ಮೆರವಣಿಗೆ

ಕಲಬುರಗಿ:ನ,3: ಅಫಜಲಪುರ ತಾಲ್ಲೂಕಿನ ಚಿನಮಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಮೈಲಾಪೂರ ಶ್ರೀ ಮೈಲಾರಲಿಂಗೇಶ್ವರನ ಮೂರ್ತಿ ಮೆರವಣಿಗೆ ನಡೆಯಿತು.

ಇಪ್ಪತೈದು ಮುತೈದೆಯರಿಂದ ತುಂಬಿದ ಕೊಡ ತಲೆಯ ಮೇಲೆ ಇಟ್ಟುಕೊಂಡು ದೇವಸ್ಥಾನ ಎಡಬಾಗದ ಭೀಮಾನದಿಂದ ಪ್ರಾರಂಭಗೊಂಡ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಡೊಳ್ಳು ಕುಣಿತ, ಹಲಗಿ, ಪಟಾಕಿ ಹಾಗೂ ಭಂಡಾರ ಎರಚುತ್ತಾ ಹೊರಗಿನ ಹನುಮಾನ ಮಂದಿರಕ್ಕೆ ಭೇಟಿಯಾಗಿ ಮರಳಿ ಶ್ರೀ ಮೈಲಾರಲಿಂಗನ ಸನ್ನಿದಿಗೆ ತಲುಪಿತು.

ಶ್ರೀ ಮೈಲಾರಲಿಂಗನ ಮೆರವಣಿಗೆಯಲ್ಲಿ ಗ್ರಾಮದ ಮಹಿಳೆಯರು, ಹಿರಿಯರು ಹಾಗೂ ಅಪಾರ ಸಂಖ್ಯೆಯ ಯುವಕರು ಸ್ವಇಚ್ಛೆಯಿಂದ ಭಾಗವಹಿಸಿ ದೇವರ ದರ್ಶನ ಪಡೆಯುವುದರ ಜೊತೆಗೆ ಮೆರವಣಿಗೆಗೆ ಮೆರಗು ತಂದರು.

ಈ ಕಾರ್ಯಕ್ರಮದ ಅನ್ನದಾಸೋಹ ವ್ಯವಸ್ಥೆಯನ್ನು ಗ್ರಾಮದ ಮುಖಂಡ ಹಾಗೂ ಶ್ರೀ ಮೈಲಾರಲಿಂಗನ ಪರಮಭಕ್ತನಾದ ಶರಣು ಪಿ. ತಳಕೇರಿ ಹಾಗೂ ಅವರ ಕುಟುಂಬ ಸದಸ್ಯರು ವಹಿಸಿಕೊಂಡಿದ್ದರು.

ಇಪ್ಪತೈದು ಮುತೈದೆಯರ ಕುಂಬ ಮೇಳಕ್ಕಾಗಿ ಬೇಕಾಗಿರುವ ಇಪ್ಪತೈದು ಕೊಡಗಳನ್ನು ಶರಣಪ್ಪ ಮ್ಯಾಕೇರಿ(ಗ್ಯಾಂಗೇರಿ) ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನ ಪೂಜಾರಿ ಪ್ರಭುಲಿಂಗ ತಳಕೇರಿ, ಗ್ರಾಮದ ಮುಖಂಡರಾದ ಅಯ್ಯಣ್ಣಾ ತಳಕೇರಿ (ಹಾಳ), ಸಿದ್ದಪ್ಪ ಬನ್ನಿಗಿಡ, ಸದಾಶಿವ ತಳಕೇರಿ, ದೌಲಪ್ಪ ತಳಕೇರಿ, ರವಿ ಮ್ಯಾಕೇರಿ, ದೌಲಪ್ಪ ಇಟಂಗಿ ಭಟ್ಟಿ, ಮಹಾಂತಪ್ಪ ತಳಕೇರಿ, ದೌಲಪ್ಪ ಮ್ಯಾಕೇರಿ, ಸುಭಾಷ್ ಮ್ಯಾಕೇರಿ, ಕುಮಾರ್ ತಳಕೇರಿ ಸೇರಿದಂತೆ ಹಲವಾರು ಮಹಿಳೆಯರು ಹಾಗೂ ಯುವಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.