ಚಿನಮಳ್ಳಿ ; ಜ. 14 ಮತ್ತು 15 ರಂದುಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ

ಅಫಜಲಪೂರ:ಜ.12: ತಾಲೂಕಿನ ಚಿನಮಳ್ಳಿ ಗ್ರಾಮದ ಆರಾಧ್ಯ ದೈವ ಅಭಿನವ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಇದೇ ಜ.14 ಮತ್ತು 15 ರಂದು ಅತೀ ವಿಜೃಂಭಣೆಯಿಂದ ಜರುಗಲಿದೆ.

ಜ. 14 ರಂದು ಬೆಳಿಗ್ಗೆ ಸುಮಾರು 3 ಗಂಟೆಗೆ ಗ್ರಾಮದ ಎಡದಂಡೆಯಲ್ಲಿರುವ ಭೀಮಾ

ನದಿಯಿಂದ 108 ಮುತ್ತೈದೆಯರಿಂದ ಕುಂಬಮೇಳವನ್ನು ಭಾಜಿ, ಭಜಂತ್ರಿ, ಡೊಳ್ಳು ಕುಣಿತ

ಹಾಗೂ ಪಟಾಕಿ ಸಿಡಿಸುವುದರೊಂದಿಗೆ ಶ್ರೀ ಮಲ್ಲಿಕಾರ್ಜುನ ದೇವಾಸ್ಥಾನದವೆಗೆ ಕುಂಭ ಮೇಳದ ಮೆರವಣಿಗೆ ನಡೆಯಲಿದೆ. ಸಂಜೆ 8 ಗಂಟೆಗೆ ಧಾರ್ಮಿಕ ಸಭೆ ಸಮಾರಂಭದಲ್ಲಿ

ಹಲಾರು ಮಠಾಧೀಶರು, ರಾಜಕೀಯ ಗಣ್ಯರು, ಕಲಾವಿಧರು ಸೇರಿದಂತೆ ಅನೇಕ ಮುಕ0ಡರು

ಸೇರಿದಂತೆ ಸಾವೀರಾರು ಭಕ್ತಾದಿಗಳು ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳುವರು.

ಜ.15 ಬೆಳಗಿನ ಜಾವ 4 ಗಂಟೆಗೆ ಬಿಲ್ವ ಪತ್ನಿ ಹಾಗೂ ಹೂವುಗಳಿಂದ ಮೂರ್ತಿ ಪೂಜೆಯನ್ನು ಪೂಜಾರಿಯಿಂದ ನೇರವೇರಲಾಗುವುದು. 7 ಗಂಟೆಯಿಂದ 9 ಗಂಟೆಯವರೆಗೆ ಐದು ಸುತ್ತು ಶಸ್ತ್ರಾಸ್ತ್ರಳನ್ನು ಆಡುವ ಶ್ರೀ ಮಲ್ಲಿಕಾರ್ಜುನ ದೇವರು ಗರ್ಭ ಗುಡಿಯನ್ನು ಪ್ರವೇಶ ಮಾಡುವರು.

ನೂರಾರು ಪುರವಂತರಿಂದ ಮೂಲಕ ಹಲವಾರು ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು ಶ್ರೀ ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ಕಾಯಿ ಕರ್ಪೂರ ಮಾಡಲು ಅವಕಾಶವಿದೆ ಎಂದು ಅಭಿನವ ಶ್ರೀ ಮಲ್ಲಿಕಾರ್ಜುನ ಅಭಿವೃದ್ಧಿ ಸಮಿತಿ ವತಿಯಿಂದ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.