ಚಿನಕೇರಾದಲ್ಲಿ ಯಶಸ್ವಿಯಾಗಿ ಜರುಗಿದ ಕನಕ ದಾಸರ ಜಯಂತಿ ಆಚರಣೆ

ಹುಮನಬಾದ:ನ.12: ತಾಲೂಕಿನ ಚಿನಕೇರಾ ಗ್ರಾಮದಲ್ಲಿ ದಾಸ ಶ್ರೇಷ್ಠ ಭಕ್ತ ಕನಕ ದಾಸರ 535 ನೇ ಜಯಂತಿಯನ್ನು ಅತ್ಯಂತ ಸರಳ ಸಜ್ಜನಿಕೆಯಿಂದ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ,ಪರಿಸರವಾದಿ ಪ್ರದೀಪರೆಡ್ಡಿ ಚಿನಕೇರಾ ಕನಕದಾಸರು ಈ ನಮ್ಮ ಸಮಾಜಕ್ಕೆ ಬೆಲೆ ಕಟ್ಟಲಾಗದಂತಹ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆ ಈ ಭೂಮಿ, ಸೂರ್ಯ, ಚಂದ್ರ ಇರುವವರೆಗೂ ಶಾಶ್ವತ. ಕನಕದಾಸರ ಬಗ್ಗೆ ವರ್ಣಿಸಲು ಪದಗಳೇ ಸಾಲದು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಮುಂದೆ ಸಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಬಂಡೆಪ್ಪ ಕಡ್ಡಿ, ಗ್ರಾಮದ ಮುಖಂಡರಾದ ರಾಮಣ್ಣ ಹಾಗು ಶಿವರಾಜ ಸಂಬಾಜಿ, ಯುವಕರಾದ ಮಾಣಿಕ ಕಡ್ಡಿ, ಸುಭಾಸ ಹಾಗು ರವಿ ಚಿಂಚೋಳಿಕರ್, ಬೊಮ್ಮಗೊಂಡ, ನಾಗರಾಜ ಹಾಗು ಗೋವಿಂದ ಘೊಡವಾಡಿ, ನಾಗೇಶ ಹಾಗು ಅಂಬದಾಸ ಕನಕಟ್ಟಾ, ಅಕ್ಷಯರೆಡ್ಡಿ ಪುಟ್ಟನೆ,ಲೋಕೇಶ ಸಿದ್ಧಗೊಂಡ, ಮುಂತಾದವರು ಉಪಸ್ಥಿತರಿದ್ದರು.