ಚಿದ್ರಿಯಲ್ಲಿ ಸ್ವಸಹಾಯ ಸಂಘಗಳ ದಿನ

ಬೀದರ:ನ.17: ನಗರದ ಹೊರವಲಯದಲ್ಲಿರುವ ಚಿದ್ರಿ ಗ್ರಾಮದಲ್ಲಿ ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಸಹಕಾರ ದಿಗ್ಗಜ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರ 79ನೇ ಜಯಂತ್ಯೋತ್ಸವ ನಿಮಿತ್ಯ ಸ್ವಸಹಾಯ ಸಂಘಗಗಳ ದಿನಾಚರಣೆ ಜರುಗಿತು.

ಸಂಸ್ಥೆಯ ಅಧ್ಯಕ್ಷರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕøತೆ ಕು.ಮಂಗಲಾ ಮರಕಲೆ ಅವರು ನಾಗಮಾರಪಳ್ಳಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸ್ವಸಹಾಯ ಸಂಘಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮಹಿಳೆಯರ ಮಾನ ಕಾಪಾಡಿ, ಅವರಲ್ಲಿ ಬದುಕುವ ಧೈರ್ಯ ತುಂಬಿ, ಅವರನ್ನು ಆರ್ಥಿಕ ಸಬಲರಾಗಿ ಮಾಡಿರುವ ಕೀರ್ತಿ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರಿಗೆ ಸಲ್ಲುತ್ತದೆ. ಅವರ ಸುಪುತ್ರರೂ ಹಾಗೂ ಹಾಲಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ಸಹ ತಂದೆಯ ದಾರಿಯಲ್ಲಿ ಮುನ್ನಡೆಯುತ್ತ ಸ್ತ್ರೀ ಕುಲ ಉದ್ದಾರಕ್ಕಾಗಿ ಪಣತೊಟ್ಟಿರುವರು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಸಂಘಗಳ ಪ್ರಮುಖರಾದ ಪಂಚಶೀಲಾ, ಜೈಶ್ರೀ, ಮಹಾದೇವಿ, ತೇಜಮ್ಮ, ಜಗದೇವಿ, ಕವಾಲಿ, ಶೃತಿ, ಲಲಿತಾ, ಶರಣಮ್ಮ ಬಡಿಗೇರ್, ಸರಸ್ವತಿ, ಸಾಧು, ಜ್ಯೋತಿ ಪಾಟೀಲ್, ಸಂಗಮೇಶ್ ಭಾವಿದೊಡ್ಡಿ ಸೇರಿದಂತೆ ಅನೇಕರಿದ್ದರು.