ಚಿತ್ರ ನಿರ್ಮಾಪಕ ಚಂದ್ರು ನಿಧನ

ಬೆಂಗಳೂರು,ಏ.೨೯- ಕೊರೊನಾ ಸೋಂಕಿನಿಂದ ಕಳೆದ ಕೆಲ ದಿನಗಳ ಹಿಂದೆ ಹಿರಿಯ ನಿರ್ಮಾಪಕ ಕೋಟಿ ರಾಮು ನಿಧನರಾಗಿದ್ದ ಬೆನ್ನಲ್ಲೇ ಮತ್ತೊಬ್ಬ ಹಿರಿಯ ನಿರ್ಮಾಪಕ ಚಂದ್ರಶೇಖರ್ ಕಳೆದ ರಾತ್ರಿ ನಿಧನರಾದ್ದಾರೆ.
ಕೊರೊನಾ ಸೋಂಕು ತಗುಲಿ ಕೆಲ ದಿನಗಳ ಹಿಂದೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ಚಂದ್ರ ಶೇಖರ್, ಶ್ವಾಸಕೋಶದ ಸಮಸ್ಯೆ ಮತ್ತಷ್ಟಯ ಬಿಗಡಾಯಿಸಿ ಸಾವನ್ನಪ್ಪಿದ್ದಾರೆ.
ಅಣ್ಣಯ್ಯ, ಬಿಂದಾಸ್, ರನ್ನ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಿಸಿದ್ದರು. ಬಹುತೇಕ ಸ್ಟಾರ್ ನಟರಿಗೆ ಸಿನಿಮಾ ನಿರ್ಮಾಣ ಮಾಡಿ ಯಶಸ್ಸು ಕೂಡ ಕಂಡಿದ್ದರು.
ಕೊರೊನಾ ಸೋಂಕಿನಿಂದ ೨೩ ದಿನಗಳ ನಿಂದ ಚೇತರಿಸಿಕೊಂಡು ಮರಳಿ ಮನೆಗೆ ಬಂದಿದ್ದರು.ಮತ್ತೆ ಶ್ವಾಸಕೋಶದ ಸಮಸ್ಯೆ ಕಾಸಿಣಿಕೊಂಡು ಅವರ ಮೃತಪಟ್ಟಿದ್ದಾರೆ.
ಮಗಳು,ಅಳಿಯ,ಪತ್ನಿ ಸೇರಿದಂತೆ ಕುಟುಂಬದ ಸದಸ್ಯರನ್ನು ಚಂದ್ರಶೇಖರ್ ಅಗಲಿದ್ದಾರೆ.
ಸಂತಾಪ:
ಹಿರಿಯ ನಿರ್ಮಾಪಕ ಚಂದ್ರಶೇಖರ್ ಅವರ ನಿಧನಕ್ಕೆ ಚಲನಚಿತ್ರ ನಿರ್ಮಾಪಕರ ಸಂಘ ಮತ್ತು ಚಲನ ಚಿತ್ರ ವಾಣಿಜ್ಯ ಮಂಡಳಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಚಿತ್ರರಂಗದ ಹಿರಿ ಕಿರಿಯ ಕಲಾವಿದರು ಒಬ್ಬೊಬ್ಬರೇ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ. ಇದು ಚಿತ್ರರಂಗವನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ.