ಚಿತ್ರ ನಿರ್ದೇಶಕ ಭರತ್ ನಿಧನ


ಬೆಂಗಳೂರು, ಡಿ.೨೫- ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಯುವ ನಿರ್ದೇಶಕ ಭರತ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ನಿನ್ನೆ ರಾತ್ರಿ ೧೧ಗಂಟೆಯ ಸಮಯದಲ್ಲಿ ನಿಧನರಾಗಿದ್ದಾರೆ.ನಟ ಶ್ರೀ ಮುರುಳಿ ಅವರ “ಕಂಠಿ” ಚಿತ್ರ ನಿರ್ದೇಶನ ಮಾಡುವ ಮೂಲಕ ಭರತ್ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದರು ತೀರಾ ಇತ್ತೀಚೆಗೆ ನಟ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರಿಗಾಗಿ ಸಾಹೇಬ ಚಿತ್ರ ನಿರ್ದೇಶನ ಮಾಡಿದ್ದರು.ಮೂತ್ರ ಪಿಂಡದ ವೈಫಲ್ಯದಿಂದ ಕಳದೊಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮೃತ ಭರತ್ ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಯುವ ನಿರ್ದೇಶಕನ ಅಕಾಲಿಕ ಮರಣಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ಆನೆ ಹಠಾತ್ ದಾಳಿಗೆ ಅರಣ್ಯ ವೀಕ್ಷಕ ಬಲಿ
ಮೈಸೂರು,ಡಿ.೨೫-ನಾಗರಹೊಳೆ ಉದ್ಯಾನದಲ್ಲಿ ಆನೆ ಹಠಾತ್ ದಾಳಿ ನಡೆಸಿದ್ದರಿಂದ ಅರಣ್ಯ ವೀಕ್ಷಕರೊಬ್ಬರು ಬಲಿಯಾಗಿ ಇಬ್ಬರು ಗಾಯಗೊಂಡಿದ್ದಾರೆ.
ಬೀಟ್‌ಗೆ ತೆರಳುತ್ತಿದ್ದ ವೇಳೆ ಸಲಗ ಎಕಾಏಕಿ ಮೂವರ ಮೇಲೆ ದಾಳಿ ಮಾಡಿದ್ದರಿಂದ ನಾಗರಹೊಳೆ ಅರಣ್ಯ ವ್ಯಾಪ್ತಿಯ ಅರಣ್ಯ ವೀಕ್ಷಕ ಗುರುರಾಜ್ (೫೨) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ವಾಚರ್ ಅಶೋಕ ಸಲಗದ ದಾಳಿಯಿಂದ ಗಾಯಗೊಂಡಿದ್ದು, ಕೊಡಗಿನ ಕುಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗರಹೊಳೆ ಡಾರ್ಮೆಂಟ್ರಿ ಬಳಿಯಿಂದ ನಿನ್ನೆ ಮಧ್ಯಾಹ್ನ ಮೂವರು ಬೀಟ್ ಆರಂಭಿಸಿದ್ದರು.ಒಂದು ಕಿ. ಮೀ. ದೂರದ ಬೈಸನ್ ಹಡ್ಲು ಎಂಬ ಪ್ರದೇಶದಲ್ಲಿ ಮೂವರ ಮೇಲೆ ಸಲಗ ದಿಢೀರ್ ದಾಳಿ ನಡೆಸಿದೆ.ದಂತದ ತಿವಿತ, ಹೊಟ್ಟೆಯ ಭಾಗವನ್ನು ಆನೆ ತುಳಿದಿದ್ದರಿಂದ ಗುರುರಾಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಶೋಕ್ ಅವರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುಣಸೂರಿನಲ್ಲಿ ವಾಸವಾಗಿದ್ದ ಗುರುರಾಜ್ ೧೯೯೧ರಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕ್ಷೇಮಾಭಿವೃದ್ಧಿ ನೌಕರರಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.
ಗುರುರಾಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಶೋಕ್ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ” ಎಂದು ಹುಲಿ ಯೋಜನೆ ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ.
ನಾಗರಹೊಳೆ ಹುಲಿ ರಕ್ಷಿತಾರಣ್ಯದ ನಿರ್ದೇಶಕರಾಗಿದ್ದ ಮಣಿಕಂಠನ್ ೨೦೧೮ರಲ್ಲಿ ಕಾಡನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.