ಚಿತ್ರ ಡಾನ್ ಬೋಸ್ಕೋ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ

 ಚಿತ್ರದುರ್ಗ. ನ.೩೦: ಮಕ್ಕಳು ಕಲಿಕೆಯಲ್ಲಿ ಜೀವನದಲ್ಲಿ ಖುಷಿಯಾಗಿ ಇರಬೇಕು ಡಾನ್ ಬಾಸ್ಕೋ ಸಂಸ್ಥೆ, ನಿರ್ದೇಶಕರಾದ ಫಾದರ್ ಸಜಿ ಜಾರ್ಜ್ ಹೇಳಿದರು.ಮಕ್ಕಳು ಕಲಿಕೆಯಲ್ಲಿ, ಜೀವನದಲ್ಲಿ ಖುಷಿಯಾಗಿ ಇರಬೇಕು, ಅದಕ್ಕಾಗಿ ಚಿತ್ರ ಡಾನ್ ಬೋಸ್ಕೋ ಸಂಸ್ಥೆಯು ಮಕ್ಕಳ ದಿನಾಚರಣೆಯನ್ನು ಹಮ್ಮಿಕೊಂಡಿದೆ. ಈ ರೀತಿಯಾದ ಮಕ್ಕಳ ದಿನಾಚರಣಿಯನ್ನು ಸುಮಾರು ವರ್ಷಗಳಿಂದಲೂ ನಡೆಸಿಕೊಂಡು ಬಂದಿದ್ದು, ಮಕ್ಕಳು ಎಲ್ಲಾ ಆಟಗಳಲ್ಲೂ ಭಾಗವಹಿಸಿ ಬಹುಮಾನಗಳನ್ನು ಗೆಲ್ಲಬೇಕು ಹಾಗೂ ಸುರಕ್ಷಿತವಾಗಿ ಆಡಬೇಕು ಎಂದು ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಜಿ ಜಾರ್ಜ್ ಕ್ರೀಡೆಗಳನ್ನ ಉದ್ಘಾಟಸುತ್ತಾ ಮಾತನಾಡಿದರು.ಅವರು ನಗರದ ಚಿತ್ರ ಡಾನ್ ಬೋಸ್ಕೋ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಂಜೆ ಶಾಲೆ ಮಕ್ಕಳು, ಮಕ್ಕಳ ಹಕ್ಕುಗಳ ಕ್ಲಬ್ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳ ವಿವಿಧ ಆಟದ ಸ್ಟಾಲ್‌ಗಳನ್ನು, ಕ್ರೀಡೆಗಳನ್ನ ಉದ್ಘಾಟಿಸಿ ಮಾತನಾಡುತ್ತಿದ್ದರು. ಆಂಗ್ಲ ಮಾಧ್ಯಮ ಡಾನ್ ಬೋಸ್ಕೋ ಪ್ರಾಂಶುಪಾಲರಾದ ಫಾದರ್ ಲಾರೆನ್ಸ್ ಜವಾಹರಲಾಲ್ ನೆಹರು ಅವರ ಫೋಟೋಗೆ ಪುಷ್ಪಾರ್ಚನೆ ಮಾಡುತ್ತಾ ಮಕ್ಕಳ ಮನಸ್ಸನ್ನ ಅರಿತು ಅವರನ್ನ ಉತ್ತಮ ನಾಗರೀಕರನ್ನಾಗಿಸಬೇಕು. ಹಿಂದುಳಿದ ಮಕ್ಕಳನ್ನ ಮುಂದೆ ತರುವುದೇ ಡಾನ್ ಬೋಸ್ಕೋ ಉದ್ಧೇಶವಾಗಿದೆ, ನೆಹರುರವರು ಮಕ್ಕಳನ್ನ ಪ್ರೀತಿಸಿದರು ಹಾಗೂ ಮಕ್ಕಳು ನೀಡಿದ ಗುಲಾಬಿಯನ್ನ ತಮ್ಮ ಕೋಟಿಗೆ ಧರಿಸಿ ಅವರ ಮನಸ್ನನ್ನ ಗೆಲ್ಲುತ್ತಿದ್ದರು ಎಂದರು.ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ಹೆಚ್.ಕೆ.ಎಸ್. ಸ್ವಾಮಿ, ಜಿಲ್ಲಾ ಆಸ್ಪತ್ರೆ ದಂತ ವೈದ್ಯರಾದ ಡಾಕ್ಟರ್ ನಾಗಮಣಿ, ಚಿತ್ರ ಡಾನ್ ಬೋಸ್ಕೋ ಸಿಬ್ಬಂದಿಗಳು, ಬ್ರದರ್ಸ್ , ಯುವಕರು, ಶಿಕ್ಷಕ ಶಿಕ್ಷಕಿಯರು ಇದ್ದರು.