ಚಿತ್ರೀಕರಣ ವೇಳೆ ನಟಿ ಸಂಯುಕ್ತ ಹೆಗ್ಡೆಗೆ ಪೆಟ್ಟು: ಆಸ್ಪತ್ರೆಗೆ ದಾಖಲು,ಚಿತ್ರೀಕರಣ ಸ್ಥಗಿತ

ಬೆಂಗಳೂರು,ಜು.27 ಕ್ರೀಮ್ ಚಿತ್ರೀಕರಣದ ಸಾಹಸ ಸನ್ನಿವೇಶ ಚಿತ್ರೀಕರಣದ ವೇಳೆ ಕಿರಿಕ್ ಬೆಡಗಿ ನಟಿ ಸಂಯುಕ್ತ ಹೆಗ್ಡೆ ಅವರಿಗೆ ಬಾರಿ ಪೆಟ್ಟಾಗಿದ್ದು ಚಿತ್ರೀಕರಣ ಮುಂದೂಡಲಾಗಿದೆ.

ಕ್ರೀಮ್ ಚಿತ್ರೀಕರಣದ ಸಾಹಸ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ತಲೆಗೆ ಬಾರಿ ಪೆಟ್ಟು ಬಿದ್ದಿದೆ.ಡೂಪ್ ಬಳಸದೇ ಇರುವುದು ಅವಘಡಕ್ಕೆ ಕಾರಣ ಎನ್ನಲಾಗಿದೆ.

ನಿರ್ದೇಶಕ ಅಭಿಷೇಕ್ ಬಸಂತ್, ನಿರ್ಮಾಪಕ ಡಿ ಕೆ. ದೇವೇಂದ್ರ, ಫೈಟ್ ಮಾಸ್ಟರ್ ಪ್ರಭು ಹಾಗೂ ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ಅವರು ಡ್ಯೂಪ್ ಬಳಸಲು ಒತ್ತಾಯಿಸಿದರೂ ನಾಯಕಿ ಸಂಯುಕ್ತ ಹೆಗಡೆ ಒಪ್ಪದೆ ಸಾಹಸ ಮಾಡಲು ಹೋಗಿ ಬಾರಿ ಪೆಟ್ಟು ಮಾಡಿಕೊಂಡಿದ್ದಾರೆ.

ಸಾಹಸ ದೃಶ್ಯದ ಚಿತ್ರೀಕರಣ ಸಮಯದಲ್ಲ ನಟಿ ಸಂಯುಕ್ತ ಕಾಲು ತಿರುಚಿಕೊಂಡಿದೆ ಎನ್ನಲಾಗಿದೆ. ಫೈಟ್ ಸೀಕ್ವೆನ್ಸ್ ಕನ್ನಡ ಚಿತ್ರ ರಸಿಕರನ್ನು ದಂಗುಗುಡಿಸಿದ್ದು ಚಿತ್ರೀಕರಣವನ್ನು ಮುಂದೂಡಲಾಗಿದೆ…

ಕಣ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ:

ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಅವಘಡ ಸಂಭವಿಸಿ ನಟಿ‌ಸಂಯುಕ್ತ ಹೆಗಡೆ ಕಾಲಿಗೆ ಪೆಟ್ಟಾಗಿದೆ. ಕಣ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಚಿತ್ರೀಕರಣ ಸ್ಥಗಿತ ಮಾಡಲಾಗಿದೆ ಎಂದು ನಿರ್ಮಾಪಕ ದೇವೇಂದ್ರ ತಿಳಿಸಿದ್ದಾರೆ.