ಚಿತ್ರೀಕರಣದ ಹಂತದಲ್ಲಿ ಬರ್ಗೆಟ್ ಬಸ್ಯಾ

ಹೊಸಬರ ಬರ್ಗೆಟ್ ಬಸ್ಯಾ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಚಿತ್ರವನ್ನು ಬೆಂಗಳೂರು, ಸಕಲೇಶಪುರ, ತೀರ್ಥಹಳ್ಳಿ ಮುಂತಾದ ಸ್ಥಳಗಳು ಚಿತ್ರೀಕರಣಕ್ಕೆ ಆಯ್ಕೆಯಾಗಿದೆ. ‘ಕಂಡ ಕಂಡ ಹುಡುಗಿಯರನ್ನೆಲ್ಲ ಲವ್ ಮಾಡಿ ಎಂದು ಬರ್ಗೆಟ್ ಬಸ್ಯ ಎನ್ನುವ ಪಾತ್ರಧಾರಿ ಅವರನ್ನು ಹಿಂಬಾಲಿಸುವುದರ ಬಗ್ಗೆ’ ಕಥಾವಸ್ತುವಿದೆ.  ಇದನ್ನು ಸಂಪೂರ್ಣ ಹಾಸ್ಯ ರೂಪದಾಲ್ಲಿ ತರಲಾಗುತ್ತೆ.

ಬಳ್ಳಾರಿಯವರಾದ ವೈ.ನಾಗಾರ್ಜುನ ರೆಡ್ಡಿ ನಿರ್ಮಿಸುತ್ತಿರುವ ‘ಬರ್ಗೆಟ್ ಬಸ್ಯಾ’ ಚಿತ್ರದ ಚಿತ್ರೀಕರಣ ರಾಜಾಜಿನಗರ, ಮಹಾಲಕ್ಷ್ಮೀ ಬಡಾವಣೆಯಲ್ಲಿ ನಡೆಯಿತು.

 ಈ ಚಿತ್ರವನ್ನು ರಿಶ್ ಹಿರೇಮಠ್, ಮೊದಲಬಾರಿಗೆ ನಿರ್ದೇಶಿಸಿದ್ದು, ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ.  ನಿರ್ದೇಶನ ವಿಭಾಗದಲ್ಲಿ ತರಬೇತಿ ಪಡೆದಿದ್ದು, ಹಲವು ನಿರ್ದೇಶಕರ ಬಳಿ ಕೆಲಸ   ಮಾಡಿದ್ದಾರೆ.

ಚಿತ್ರದ ನಾಯಕಿ ಸಂಗೀತ ಎನ್.ಸ್ವಾಮಿ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. ಶಾಮ್ ಸೆಲ್ವಿನ್  ಛಾಯಾಗ್ರಹಣ, ಅನುಜ್ ಎಸ್ ಪರಿವೃದ್  ಸಂಗೀತವಿದೆ.