ಚಿತ್ರಮಂದಿರ ಆರಂಭಕ್ಕೆ ಸಾ.ರಾ. ಗೋವಿಂದು ಮನವಿ

Shivakumar dineshgudu rao ramesh Salim amhed during the zoo. Confrence on lock down issue st kpcc office

ಬೆಂಗಳೂರು, ಏ.೨೬- ರಾಜ್ಯದಲ್ಲಿ ಚಿತ್ರಮಂದಿರ ಆರಂಭಿಸಲು ಅವಕಾಶ ಮಾಡಿಕೊಡಲು ಸಹಕಾರ ನೀಡಬೇಕು ಎಂದು ಚಲನಚಿತ್ರರಂಗದ ಪ್ರಮುಖರು ಕಾಂಗ್ರೆಸ್ ನಾಯಕರಿಗೆ ಇಂದಿಲ್ಲಿ ಮನವಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರು ಚರ್ಚೆ ನಡೆಸಿದ ನಾಯಕರು ಈ ಮನವಿ ಮಾಡಿದ್ದಾರೆ .
ರಾಜ್ಯದಲ್ಲಿ ಚಿತ್ರಮಂದಿರಕ್ಕೆ ಅವಕಾಶ ಮಾಡಿಕೊಡುವ ಸಂಬಂಧ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಐಎನ್ ಎಸ್ ಪ್ರಸಾದ್ ಅವರೊಂದಿಗೆ ಸಭೆ ನಡೆಸಲಾಗಿದೆ ಈ ಸಂಬಂಧವನ್ನು ಅಂತಿಮ ನಿರ್ಧಾರಕ್ಕೆ ಸರಕಾರ ಬಂದಿಲ್ಲ. ಕಾಂಗ್ರೆಸ್ ಪಕ್ಷವು ಕೂಡ ಸರ್ಕಾರದ ಮೇಲೆ ಒತ್ತಡ ಹೇರಿ ಚಿತ್ರಮಂದಿರ ಆರಂಭಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ ಗೋಂವಿದು ಮನವಿ ಮಾಡಿದ್ದಾರೆ.
ಕೆಪಿಸಿಸಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೇ. ೫೦ರ ಸಾಮರ್ಥ್ಯ ದಲ್ಲಿ ಚಿತ್ರಮಂದಿರವನ್ನು ನಡೆಸುವುದು ಕಷ್ಟಸಾಧ್ಯ ಈಗ ಪೂರ್ಣ ಪ್ರಮಾಣದಲ್ಲಿ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಚಿತ್ರರಂಗದ ಮೇಲೆ ವಿಧಿಸಿರುವ ಜಿಎಸ್ ಟಿ ವಿಷಯದಲ್ಲಿ ಪೂರಕವಾಗಿ ಕ್ರಮ ಕೈಗೊಳ್ಳಬೇಕು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ