ಚಿತ್ರಮಂದಿರ‌ದ ಶೇ.50 ಮಿತಿ ತೆರವು ಮಾಡಿ: ಸರ್ಕಾರಕ್ಕೆ ಪುನೀತ್ ಮನವಿ

ಬೆಂಗಳೂರು,ಏ.2- ಚಿತ್ರಮಂದಿರಗಳಲ್ಲಿ ಶೇಕಡ  50 ರಷ್ಟು ಪ್ರೇಕ್ಷಕರ ಮಿತಿಗೊಳಿಸುವ ಏರಿಕೆಯಿಂದಾಗಿ “ಯುವರತ್ನ” ಚಿತ್ರಕ್ಕೆ ಅನ್ಯಾಯವಾಗಲಿದೆ. ದಯವಿಟ್ಟು 100 ರ ಸಾಮರ್ಥ್ಯದಲ್ಲೇ  ಚಿತ್ರ  ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕೆಂದು  ನಟ ಪುನೀತ್ ರಾಜ್‌ಕುಮಾರ್ ರಾಜ್ಯ ಸರ್ಕಾರಕ್ಕೆ  ಮನವಿ ಮಾಡಿದ್ದಾರೆ. 

ಏಕಾಏಕಿ ಶೇಕಡ  50 ರಷ್ಟು ಪ್ರೇಕ್ಷಕರ ಸಾಮರ್ಥ್ಯಕ್ಕೆ ಇಳಿಸಿರುವುದು ಬೇಸರ ತರಿಸಿದೆ. ಮುಂಚೇ  ಹೇಳಿದ್ದರೆ, ಚಿತ್ರ ಬಿಡುಗಡೆಮಾಡುವುದರ  ಕುರಿತು ನಿರ್ಧಾರ ತೆಗೆದುಕೊಳ್ಳುತ್ತದ್ದೇವು. ಮುಂದೆ ಏನು ಮಾಡುವ ಕುರಿತು ನಿರ್ಧರಿಸಲಾಗುವುದು ಎಂದರು. 

ರಾಜ್ಯಾದ್ಯಂತ  ಯುವರತ್ನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಾವು ಮಾಡಿರುವ  ಪ್ರಯತ್ನಗಳಿಗೆ  ಫಲ ಸಿಗಬೇಕಾದರೆ ಅದು ಪ್ರೇಕ್ಷಕರಿಂದ ಮಾತ್ರ. ಈ ರೀತಿ  ಶೇಕಡ 50 ರಷ್ಟು ನಿಬಂಧ ಹೇರಿದರೆ ನಿಜಕ್ಕೂ ತೊಂದರೆಯಾಗಲಿದೆ. ಇದಕ್ಕೆ  ದಯವಿಟ್ಟು ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದ್ದಾರೆ. 

ಫೇಸ್ ಬುಕ್ ಲೈವ್ ಮೂಲಕ ಮಾಹಿತಿ ಹಂಚಿಕೊಂಡ  ಪುನೀತ್ ರಾಜ್‌ಕುಮಾರ್, ಸರ್ಕಾರ  ಶೇಕಡ 50 ರಷ್ಟು ಮಿತಿಯನ್ನು ರದ್ದು ಮಾಡಿ, ಯುವರತ್ನ ಚಿತ್ರಕ್ಕಷ್ಟೇ ಅಲ್ಲದೇ  ಕನ್ನಡ ಚಿತ್ರರಂಗಕ್ಕೂ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ. 

ಕಡ್ಡಾಯವಾಗಿ ಮಾಸ್ಕ್ ಧರಿಸಿ:

ಪ್ರೇಕ್ಷಕರು ಚಿತ್ರಮಂದಿರದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಚಿತ್ರ ನೋಡಿ. ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡಿ ಎಂದು ಅಭಿಮಾನಿಗಳಿಗೂ ಮತ್ತು ಜನತೆಗೆ ಮನವಿ ಮಾಡಿದ್ದಾರೆ. 

ಯುವರತ್ನ ಚಿತ್ರದ ಪೈರಸಿ ಬಂದಿರುವ ಕುರಿತು ಮಾತುಗಳು ಕೇಳಿ ಬಂದಿವೆ. ಪೈರಸಿಯನ್ನು ತಡೆಯಲು ಸಾಧ್ಯವಿಲ್ಲ. ಆದರೆ ಜನರು ಬದಲಾಗಬೇಕು, ಯಾವುದೇ ಕಾರಣಕ್ಕೂ ಪೈರಸಿ ಸಿನಿಮಾ ನೋಡಬೇಕು,  ಟಿಕೆಟ್ ಪಡೆದು ಸಿನಿಮಾ ನೋಡಿ ಎಂದರು. 

ನಿಜವಾದ ಪವರ್ ನೀವು:

ಯುವರತ್ನ ನಾನಲ್ಲ ನೀವು,  ನಿಜವಾದ  ಪವರ್ ಆಫ್ ಯೂತ್ ನೀವೇ . ನಿಮ್ಮ ಪ್ರೀತಿಯ ಅಭಿಮಾನ ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ. ಇಂದು ಏನೇ ಆಗಿದ್ದರೂ ಅದಕ್ಕೆಲ್ಲಾ ನೀವೇ ಕಾರಣ.  ಹೀಗಾಗಿ ನಿಮಗೆ ಕೈಜೋಡಿಸಿ ವಂದಿಸುವೆ ಎಂದು ಹೇಳಿದರು. 

ಯುವರತ್ನ ಸಿನಿಮಾ ನೋಡಿ, ರಾಜ್ಯಾದ್ಯಂತ ಜನ ಮೆಚ್ಚುಗೆ ಮಹಾಪೂರ ಹರಿಸಿದ್ದಾರೆ.  ಹಾರ ಹಾಕಿ ಪಟಾಕಿ ಸಿಡಿಸಿ ತೋರಿದ ಅಭಿಮಾನಿಗಳ ಪ್ರೀತಿಯನ್ನು ಮರೆಯುವುದುಂಟೇ ಎಂದರು. 

ಲಸಿಕೆ ಪಡೆಯಿರಿ:

45 ವರ್ಷ ದಾಟಿದ  ಪ್ರತಿಯೊಬ್ಬರೂ ಲಸಿಕೆ ಪಡೆಯಿರಿ, ತಂದೆ, ತಾಯಿ, ಅಕ್ಕ-ತಂಗಿ ಸೇರಿದಂತೆ ಸರ್ಕಾರ  ಮಿತಿಗೊಳಿಸಿರುವ ವಯಸ್ಸು ದಾಟಿದ ಎಲ್ಲರೂ ಕಡ್ಡಾಯವಾಗಿ  ಲಸಿಕೆ   ಪಡೆಯುವಂತೆ ನೋಡಿಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ. 

ತಮಗೂ 45 ವರ್ಷ ದಾಟಿರುವ ಹಿನ್ನೆಲೆಯಲ್ಲಿ ಎರಡು-ಮೂರು ದಿನಗಳಲ್ಲಿ ಕೊರೋನಾ ಸೋಂಕಿನ ಲಸಿಕೆ ಪಡೆಯುತ್ತೇನೆ. ಅದೇ ರೀತಿ ರಾಜ್ಯದ ಎಲ್ಲ ಜನರ ಕೂಡ ಲಸಿಕೆ ಪಡೆಯುವಂತೆ ಮನವಿ ಮಾಡಿದರು. 

ನಿರ್ದೇಶಕ ಆನಂದ್ ರಾಮ್ ಮಾತನಾಡಿ, ಯುವರತ್ನ ಚಿತ್ರಕ್ಕೆ ರಾಜ್ಯದ ಎಲ್ಲ ಕಡೆ  ಉತ್ತಮ ಪ್ರತಿಕ್ರಿಯೆ ಸಿಕ್ಕಿದೇ  ಬೆಳಗಿನಿಂದಲೂ ಪ್ರತಿಕ್ರಿಯೆ ಬರುತ್ತಿದೆ.  ಜನರ ಪ್ರೀತಿ, ಬೆಂಬಲವೇ  ನಮಗೆ ಸ್ಫೂರ್ತಿ ಎಂದರು. 

ಅಭಿಮಾನಿಗಳು ಯುವರತ್ನ ಚಿತ್ರವನ್ನು ಈ ಮಟ್ಟಕ್ಕೆ ತಂದಿದ್ದಾರೆ. ಅವರೆಲ್ಲರಿಗೂ ಸದಾ ಅಭಾರಿ ಎಂದು ಅವರು ತಿಳಿಸಿದ್ದಾರೆ.