ಚಿತ್ರಮಂದಿರದ ನೌಕರವರ್ಗದವರಿಗೆ ಕಾಂಗ್ರೆಸ್ ನಿಂದ ಕಿಟ್ ವಿತರಣೆ

ದಾವಣಗೆರೆ.ಜೂ.೬; ಕೊರೋನ ಮಹಾಮಾರಿಯ ಇಂತಹ ಸಂದರ್ಭದಲ್ಲಿ ಚಿತ್ರಮಂದಿರಗಳು ನಡೆಯದೆ ಅಲ್ಲಿ ಕೆಲಸ ಮಾಡುವ ನೂರಾರು ಬಡ ಕುಟುಂಬದ ಜನರಿಗೆ ತೊಂದರೆಯಾಗಿದೆ ಆದ್ದರಿಂದ ಅಂತಹ ಬಡ ಕುಟುಂಬಗಳಿಗೆ  ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಿಟ್ ವಿತರಣೆ ಮಾಡಲಾಯಿತು  ಬೆಳಗ್ಗೆ ಚಿತ್ರಮಂದಿರದ ನೌಕರ ವರ್ಗದ ಸುಮಾರು ನೂರಕ್ಕೂ ಹೆಚ್ಚು ಬಡ ಕುಟುಂಬದವರಿಗೆ  ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ದಿನಸಿ ಕಿಟ್ ಗಳ ನೀಡಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಎ.ನಾಗರಾಜ್ಸಾಗರ್.ಎಲ್.ಹೆಚ್.ಜಿಲ್ಲಾ ಉಪಾಧ್ಯಕ್ಷರು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ.ಪ್ರಕಾಶ್,ಸುಹೀಲ್ ಆರ್ ರಾಕೇಶ್ ಡಿ.ಸಿ.ಎಂ.ಉಪಾಧ್ಯಕ್ಷರು ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿ.ಗೀತಾಂಜಲಿ ಚಿತ್ರಮಂದಿರದ ಸೂಪ್ರವೈಜರ್ ಚಂದ್ರುರವರು ಉಪಸ್ಥಿತರಿದ್ದರು