ಚಿತ್ರಮಂದಿರದಲ್ಲಿ ಶೇ.೧೦೦ ರಷ್ಟು ಸೀಟುಗಳ ಭರ್ತಿಗೆ ಒತ್ತಾಯ

ರಾಯಚೂರು,ಏ.೩- ಚಿತ್ರಮಂದಿರಗಳಲ್ಲಿ ಶೇ.೫೦ ರಷ್ಟು ಸೀಟುಗಳ ಭರ್ತಿಗೆ ಅವಕಾಶ ನೀಡಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಿ ಶೇ.೧೦೦ ರಷ್ಟು ಸೀಟುಗಳ ಭರ್ತಿಗೆ ಅವಕಾಶ ಕಲ್ಪಿಸಿಕೊಡುವಂತೆ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಮುಖ್ಯಮಂತ್ರಿಗೆ ಒತ್ತಾಯಿಸಿತು.
ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಚೇರಿಯ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು, ಏ.೧ ರಂದು ನಟ ಪುನೀತ್ ರಾಜಕುಮಾರ್ ಅವರ ಯುವರತ್ನ ಕನ್ನಡ ಚಲನಚಿತ್ರ ಬಿಡುಗಡೆಯಾಗಿದ್ದು, ರಾಜ್ಯಾದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಶೇ.೫೦ ರಷ್ಟು ಮಾತ್ರ ಚಿತ್ರಮಂದಿರದ ಸೀಟುಗಳಿಗೆ ಅನುಮತಿ ನೀಡಿದ್ದು, ಇಡೀ ಚಿತ್ರ ತಂಡವನ್ನು ಆತಂಕಕ್ಕೆ ನೂಕಿದೆ. ಯುವರತ್ನ ಚಿತ್ರ ಸಾಮಾಜಿಕ ಸಂದೇಶವುಳ್ಳ ಚಿತ್ರವಾಗಿದ್ದು, ಸರ್ಕಾರದ ಈ ಆದೇಶದಿಂದ ಚಿತ್ರದ ನಿರ್ಮಾಪಕರ, ವಿತರಕರ ಹಾಗೂ ಚಿತ್ರಮಂದಿರದ ಮಾಲಿಕರಿಗೆ ಹೆಚ್ಚಿನ ನಷ್ಟವಾಗುವ ಸಾಧ್ಯತೆಯಿದೆ ಎಂದರು.
ಆದ್ದರಿಂದ ಸರ್ಕಾರ ಚಿತ್ರಮಂದಿರದಲ್ಲಿ ಕೇವಲ ಶೇ.೫೦ ರಷ್ಟು ಸೀಟುಗಳ ಭರ್ತಿ ಅದೇಶವನ್ನು ಹಿಂಪಡೆದು, ಶೇ.೧೦೦ ರಷ್ಟು ಸೀಟುಗಳ ಭರ್ತಿಗೆ ಅವಕಾಶ ನಿಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂತೋಷ, ಜಿಲಾನಿ, ಅಜ್ಜು, ನಾಸೀರ್, ರಾಮು, ಸಂಗಯ್ಯ, ಸುಭಾಷ್, ಸಾಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.