ಚಿತ್ರದುರ್ಗ ನಗರಸಭೆ ಗದ್ದುಗೆ ಬಿಜೆಪಿ ತೆಕ್ಕೆಗೆ

ಚಿತ್ರದುರ್ಗ.ಅ.೩೧; ಐತಿಹಾಸಿಕ ಕೋಟೆ ನಗರಿ ಚಿತ್ರದುರ್ಗದ ಇತಿಹಾಸದಲ್ಲೇ ಮೊದಲ ಭಾರೀಗೆ  ನಗರಸಭೆ ಆಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಮುಂದಾಗಿದೆ.ಚಿತ್ರದುರ್ಗ ನಗರಸಭೆಯ ಒಟ್ಟು 35 ಸ್ಥಾನಗಳಲ್ಲಿ ಬಿಜೆಪಿ-17, ಕಾಂಗ್ರೆಸ್-5, ಜೆಡಿಎಸ್ – 6 ಹಾಗೂ ಪಕ್ಷೆತರ – 7 ಸ್ಥಾನಗಳು ಗೆದ್ದಿವೆ.ನಗರಸಭೆ ಆಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಬಿಸಿಎಂಎ ಗೆ ನಿಗದಿಯಾಗಿದೆ.

ಈಗಾಗಲೇ ಕಳೆದ 2 ವರ್ಷಗಳ ಹಿಂದೆ ನಡೆದ ನಗರಸಭೆ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದು ಬಹುಮತವನ್ನು ಹೊಂದಿದೆ.ಬಿಜೆಪಿ ಗೆ ಸಾಥ್ ಆಗಿ ನಾಳೆ ನಡೆಯಲಿರುವ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಕಾಂಗ್ರೇಸ್ 4, ಜೆಡಿಎಸ್ 1 ಹಾಗೂ ಪಕ್ಷೇತರರಾಗಿ ಗೆದ್ದಂತಹ ಸದಸ್ಯರುಗಳು ಬಿಜೆಪಿಗೆ ಬೆಂಬಲವನ್ನು ನೀಡಿದ್ದಾರೆ. ಇದರಿಂದಾಗಿ ಬಿಜೆಪಿಯ ಸಂಖ್ಯಾಬಲ 26 ಕ್ಕೆ ಏರಿದೆ.ಎಸ್ಟಿ ಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ನಾಗಮ್ಮ ಹಾಗೂ ತಿಪ್ಪಮ್ಮ ಇಬ್ಬರು ಮಾತ್ರ ಸದಸ್ಯರು ಇರುವುದರಿಂದ ಇಬ್ಬರು ಅಧಿಕಾರ ಹಂಚಿಕೆ ಮಾಡಿಕೊಳ್ಳು ಸಂಭವ ಇದೆ. ಇನ್ನೂ ಬಿಸಿಎಂ ಎ ಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ 10 ಜನ ಸದಸ್ಯರು ಆಕಾಂಕ್ಷಿಗಳಿದ್ದು, ಇದರಲ್ಲಿ ಯಾರಿಗೆ ಉಪಾಧ್ಯಕ್ಷರ ಸ್ಥಾನ ಒಲಿಯುವುದೋ ಕಾದು ನೋಡಬೇಕಿದೆ. ಒಟ್ಟರೆ ಚಿತ್ರದುರ್ಗ ನಗರಸಭೆಯ ಇತಿಹಾಸದಲ್ಲೇ ಮೊದಲ ಭಾರೀಗೆ ಅಧಿಕಾರಿದ ಚುಕ್ಕಾಣಿ ಹಿಡಿಯಬೇಕು ಎಂದು ಹಗಲಿರುಳು ಶ್ರಮಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಕನಸು ನಾಳೆ ನೆರೆವೇರಲಿದೆ.

ಚುನಾವಣೆಯ ಪೂರ್ವಭಾವಿಯಾಗಿ ಇಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ನಿವಾಸದಲ್ಲಿ ಸದಸ್ಯರುಗಳ ಸಭೆಯನ್ನು ನಡೆಸಿದ್ದು, ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷಗಳು. ನಂತರ ನಗರದ ಅಭಿವೃದ್ದಿಗೆ ಎಲ್ಲರೂ ಹೊಂದಾಗಬೇಕಿದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದರೆ ಅದನ್ನು ಬಿಟ್ಟು ಒಟ್ಟಾಗಿ ಮಾದರಿ ಚಿತ್ರದುರ್ಗ ನಗರಸಭೆನ್ನಾಗಿ ಮಾಡಲು ಮುಂದಾಗುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕರೆ ನೀಡಿದ್ದಾರೆ.ಸದ್ಯ ಇದೀಗಾ ಚಿತ್ರದುರ್ಗ ನಗರದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ರಸ್ತೆ ಅಗಲಿಕರಣ ಮಾಡಲಾಗುತ್ತಿದೆ. ಇದಕ್ಕೆ ಎಲ್ಲಾ ಸದಸ್ಯರುಗಳು ಸಹಕಾರ ನೀಡಬೇಕು. ಕಟ್ಟಡಗಳು ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಸದಸ್ಯರು ಮುಂದಾಗಬೇಕು ಎಂದು ಹೇಳಿದರು.