ಚಿತ್ರದುರ್ಗ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿತ್ರದುರ್ಗ. ಮಾ.೩೧; ನೆಹರು ಯುವಕೇಂದ್ರ, ಚಿತ್ರದುರ್ಗ, ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ, ಸೀಬಾರ ಗುತ್ತಿನಾಡು, ಶ್ರೀ ಜೇಡರದಾಸಿಮಯ್ಯ ಯುವಕ ಕಲಾ ಸಂಘ, ಮಠದಕುರುಬರಹಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ  ಚಿತ್ರದುರ್ಗ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ವಿಶ್ವಮಾನವ ವಿದ್ಯಾಸಂಸ್ಥೆಯ ಆಟದ ಮೈದನದಲ್ಲಿ ಆಯೋಜಿಸಲಾಗಿತ್ತು. ಕ್ರೀಡಾ ಕೂಟದಲ್ಲಿ ವಾಲಿಬಾಲ್, ಕಬ್ಬಡಿ, ಖೋ ಖೋ, ಥ್ರೋಬಾಲ್, 100 ಹಾಗೂ 200 ಮೀಟರ್ ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಿಶ್ವಮಾನವ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಹೆಚ್.ಜಲೀಲ್‌ಸಾಬ್, ಕಾರ್ಯದರ್ಶಿಗಳಾದ ನೀಲಕಂಠದೇವ, ವಿಶ್ವಮಾನವ ಕಾಲೇಜಿನ ಮುಖ್ಯಸ್ಥರಾದ ಶ್ರೀಮತಿ ಸುಧಾ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಸಿ.ಎನ್.ವೆಂಕಟೇಶ್, ಉಪನ್ಯಾಸಕರಾದ ಬಸವರಾಜ್, ಜಗದೀಶ್, ನಾಗರಾಜ್ ಇವರು ಪ್ರಶಸ್ತಿಗಳನ್ನು ವಿತರಣೆ ಮಾಡಿದರು