ಚಿತ್ರದುರ್ಗ ತಾಲೂಕಿನಾದ್ಯಂತ ರಾಷ್ಟ್ರೀಯ ಪೋಷಣೆ ಮಾಸಾಚರಣೆ ಕಾರ್ಯಕ್ರಮ

 ಚಿತ್ರದುರ್ಗ.ಸೆ.೮; ಗರ್ಭಿಣಿ ಮತ್ತು ಬಾಣಂತಿಯರು ಪೌಷ್ಠಿಕ ಆಹಾರ ಸೇವನೆ ಮಾಡುವುದರಿಂದ ಆರೋಗ್ಯವಂತ ಮಕ್ಕಳನ್ನು ಹೊಂದಲು ವಿಟಮಿನ್ ದೊರೆಯುವ ಆಹಾರ ಮತ್ತು ಅವುಗಳ ಬಳಕೆ ಕುರಿತು ಮಾಹಿತಿ ಚಿತ್ರದುರ್ಗ ತಾಲೂಕಿನಾದ್ಯಂತ ಇದು ಭಾರತ ಸರ್ಕಾರದ ಕಾರ್ಯಕ್ರಮವಾಗಿದ್ದು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಸಪ್ಟಂಬರ್2021 ಮಾಹೆಯಲ್ಲಿ ರಾಷ್ಟ್ರೀಯ ಪೋಷಣೆ ಮಾಸಾಚರಣೆ ಕಾರ್ಯಕ್ರಮಮಾಡಲಾಗುತ್ತಿದೆ ಎಂದು ಚಿತ್ರದುರ್ಗ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಸುಧಾ ಮಾಹಿತಿಯನ್ನು ನೀಡಿ ಇಂದು ಮತ್ತು ನಿನ್ನೆ ನಡೆದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು.  ಮಹಾತ್ಮ ಗಾಂದಿ ನಗರ;- ನಗರ ವೃತ್ತದ ಮಹಾತ್ಮ ಗಾಂದಿ ನಗರದ ಅಂಗನವಾಡಿ ಕೇಂದ್ರದಲ್ಲಿ ಇಂದು ಚಿತ್ರದುರ್ಗ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಸುಧಾ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಕುಂಟಿತ ಬೆಳವಣೆಗೆ, ಅಪೌಷ್ಠಿಕತೆ, ಕಡಿಮೆ ತೂಕದ ಮಕ್ಕಳ ಜನನ ಮತ್ತು ಕಿಶೋರಿಯರು, ಗರ್ಭಿಣಿ ಬಾಣಂತಿಯರಲ್ಲಿ ರಕ್ತ ಹೀನತೆ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಟಮಿನ್ ದೊರೆಯುವ ಆಹಾರ ಮತ್ತು ಅವುಗಳ ಬಳಕೆಯ ಬಗ್ಗೆ ಕಾರ್ಯಕ್ರಮದಲ್ಲಿ ಅರೋಗ್ಯ ಇಲಾಖೆಯ ಮಂಜುನಾಥ್ ಮಾರುತಿ ಪ್ರಸಾದ್, ಸಹಾgಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರಿ ಮಂಜುಳ ಇದ್ದರು.ದಂಡಿನಕುರುಬರ ಹಟ್ಟಿ;- ಕಾಸವರ ಹಟ್ಟಿ ವೃತ್ತದ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣೆ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಿತ್ರದುರ್ಗ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಸುಧಾ ಅವರು ನೈಸರ್ಗಿಕವಾಗಿ ಸಿಗುವ ಸಂಪನ್ಮೂಲವನ್ನು ಬಳಸಿಕೊಂಡು ಉತ್ತಮ ಪೋಷಕಾಂಶವನ್ನು ಗರ್ಭಿಣಿಯರು ಪಡೆದುಕೊಳ್ಳಬೇಕು ಇದರಿಂದ ಮಕ್ಕಳ ಬೆಳವಣಿಗೆ ಚೆನ್ನಾಗಿರುತ್ತದೆ ಮಕ್ಕಳ ಪೌಷ್ಟಿಕತೆ ಗಾಗಿ ವಿವಿಧ ಪೋಷಕಾಂಶಯುಕ್ತ ಔಷಧವನ್ನು ಉಚಿತವಾಗಿ ನೀಡಲಾಗುತ್ತದೆ ಇದರ ಸದುಪಯೋಗವನ್ನು ಎಲ್ಲರೂ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು ಅರೋಗ್ಯ ಇಲಾಖೆಯ ಮಂಜುನಾಥ್ ಮಾರುತಿ ಪ್ರಸಾದ್, ಸಹಾgಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರಿ ಮಂಜುಳ ಇದ್ದರು.ಯೂನಿಯನ್‌ಪಾರ್ಕ್;- ನಗರದ ಯೂನಿಯನ್‌ಪಾರ್ಕ್ ಮುಂಭಾಗದ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣೆ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ನಗರ ಸಭೆ ಅದ್ಯಕ್ಷರು ಹಾಲಿ ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ್ ಮಾತನಾಡಿ ಪೋಷಕಾಂಶಯುಕ್ತ ಆಹಾರವನ್ನು ಬಳಸಿಕೊಳ್ಳಬೇಕು ಆಹಾರ ಬಳಕೆಯಿಂದ ದೇಹದ ಶಕ್ತಿ ಹೆಚ್ಚುತ್ತದೆ ಎಂದರು ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮೂಗಪ್ಪ ಅವರು ಮಾತನಾಡಿ ಹಸಿ ತರಕಾರಿಯನ್ನು ಆಹಾರದ ಜೊತೆ ಅತಿ ಹೆಚ್ಚಾಗಿ ಬಳಸುವುದರಿಂದ ಪೋಷಕಾಂಶವೂ ದೇಹಕ್ಕೆ ದೊರೆಯುತ್ತದೆ ಇದರಿಂದ ದೇಹ ಸದೃಢವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮೇಲ್ವಿಚಾರಕರಾದ ಎಚ್ ಎಸ್ ಮಂಜುಳಾ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳು ಶ್ರೀಮತಿ ಜಾನಕಿ ಪದ್ಮಜ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಆಶ್ರಯ ಬಡಾವಣೆ;- ನಗರ ಬಿ.ವೃತ್ತದ ಆಶ್ರಯ ಬಡಾವಣೆ ಅಂಗನವಾಡಿ ಬಿ. ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಗರ್ಭಿಣಿ ಮತ್ತು ಬಾಣಂತಿಯರು ಪೌಷ್ಠಿಕ ಆಹಾರ ಸೇವನೆ ಮಾಡುವುದರಿಂದ ಆರೋಗ್ಯವಂತ ಮಕ್ಕಳನ್ನು ಹೊಂದಲು ಸಾಧ್ಯವಾಗುತ್ತದೆ ಎ,ಬಿ,ಸಿ,ಡಿ ವಿಟಮಿನ್ ದೊರೆಯುವ ಆಹಾರ ಮತ್ತು ಅವುಗಳ ಬಳಕೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಆಭಿವೃದ್ಧಿ ಯೋಜನಾಧಿಕಾರಿಗಳಾದ ಅತಿಕಾಖಾನ್ ಮಹಿಳಾ ಮೇಲ್ವಿಚಾರಕ ಎಚ್.ಎಸ್. ಮಂಜುಳಾ, 17ನೇ ವಾರ್ಡಿನ ಕೌನ್ಸಿಲರ್ ಜಯಪ್ಪ, ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಜಾನಕಿ, ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಸಹಾಯಕಿಯರು, ಇನ್ನರ್ ವೀಲ್ಹ್ ಕ್ಲಬ್‌ನ ಜಿಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಇದ್ದರು. ಇನ್ನರ್ ವೀಲ್ಹ್ ಕ್ಲಬ್ನ ಜಿಲ್ಲಾ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ ಅವರಿಗೆ ಸನ್ಮಾನಿಸಿದರು .ವೆಂಕಟೇಶ್ವರ ಬಡಾವಣೆ;- ನಗರ ಎ .ವೃತ್ತದ ವೆಂಕಟೇಶ್ವರ ಬಡಾವಣೆಯಲ್ಲಿ ರಾಷ್ಟ್ರೀಯ ಪೋಷಣೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್ ಸುಧಾ ದೈಹಿಕ ಮತ್ತು ಮಾನಸಿಕ ಸಮತೋಲನಕ್ಕಾಗಿ ಉತ್ತಮ ಪೋಷಕಾಂಶಯುಕ್ತ ಆಹಾರವನ್ನು ಬಳಸಿಕೊಳ್ಳಬೇಕು ಉತ್ತಮ ಆಹಾರವನ್ನು ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಗರ್ಭಿಣಿಯರು ಮೊಳಕೆ ಕಾಳು ಹಸಿ ತರಕಾರಿಯನ್ನು ಸೇವಿಸಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಆಭಿವೃದ್ಧಿ ಯೋಜನಾಧಿಕಾರಿಗಳಾದ ಕುಮಾರಿ ಮಂಜುಳಾ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳು ಶ್ರೀಮತಿ ಜಾನಕಿ ಪದ್ಮಜ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸಹಿದಾ ಭಾನು ಶಿಕ್ಷಕರಾದ ಕಲ್ಲೇಶಪ್ಪ ಮಹಿಳಾ ಮೇಲ್ವಿಚಾರಕಿ ಯಾದ ಇಂದಿರಾ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.Attachments area