ಚಿತ್ರದುರ್ಗ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಗಡಿ ಸೌಲಭ್ಯ ಕಲ್ಪಿಸಲು ಆಗ್ರಹ;

ಚಿತ್ರದುರ್ಗ.ಜೂ.೮; ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಮೂರು ತಾಲ್ಲೂಕುಗಳು ಗಡಿ ಪ್ರದೇಶವನ್ನು ಹೊಂದಿವೆ. ನಂಜುಂಡಪ್ಪ ವರದಿ ಅನ್ವಯ ಜಿಲ್ಲೆಯ ನಾಲ್ಕು ತಾಲ್ಕೂಕುಗಳೂ ಹಿಂದುಳಿದ ತಾಲ್ಲೂಕುಗಳಾಗಿವೆ. ಈ ಹಿನ್ನಲೆಯಲ್ಲಿ ಇಡೀ ಜಿಲ್ಲೆಯನ್ನು ಗಡಿನಾಡು ಜಿಲ್ಲೆ ಎಂದು ಘೋಷಿಸಿ, ಗಡಿ ಪ್ರದೇಶದ ಪತ್ರಿಕೆಗಳಿಗೆ ನೀಡುವ ಸೌಲಭ್ಯವನ್ನು ಚಿತ್ರದುರ್ಗ ಜಿಲ್ಲಾ ಪತ್ರಿಕೆಗಳಿಗೆ ನೀಡಬೇಕೆಂದು ಹಿರಿಯ ಪತ್ರಕರ್ತ ಶ.ಮಂಜುನಾಥ ಸರ್ಕಾರವನ್ನು ಆಗ್ರಹಿಸಿದ್ದಾರೆ.  ನಗರದ ಐಶ್ವರ್ಯ ಪೋರ್ಟ್ನಲ್ಲಿ  ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಸಂಘದ ಸಭೆಯಲ್ಲಿ ಭಾಗವಹಿಸಿ ಮಾತಾನಡಿದರು.  ಚಿತ್ರದುರ್ಗ ಜಿಲ್ಲೆಯಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗ ವಾಸಿಸುತ್ತಿದೆ. ಜೊತೆಯಲ್ಲಿ ಅತೀ ಹೆಚ್ಚು ಹಿಂದುಳಿದ ವರ್ಗದವರು ಈ ಜಿಲ್ಲೆಯಲ್ಲಿದ್ದಾರೆ. ಇದರಿಂದಾಗಿ ಚಿತ್ರದುರ್ಗ ಜಿಲ್ಲೆ ಎಲ್ಲಾ ಕ್ಷೇತ್ರದಲ್ಲೂ ಹಿಂದುಳಿದ್ದು, ಪತ್ರಿಕಾ ಕ್ಷೇತ್ರದಲ್ಲೂ ಹಿಂದುಳಿದಿದೆ. ಹಿಂದುಳಿದ ಪ್ರದೇಶಗಳಲ್ಲಿನ ಕನ್ನಡ ಭಾಷ ಪತ್ರಿಕೆಗಳಿಗೆ ಸರ್ಕಾರ ಹೆಚ್ಚಿನ ನೆರವು ಸೌಲಭ್ಯ ಕಲ್ಪಿಸಬೇಕಾಗಿದೆ ಎಂದರು.  ಸಭೆ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಸಂಪಿಗೆ ಮಾತನಾಡಿ, ಕರೋನಾ ಸಂಕಷ್ಟದಲ್ಲಿ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳು ಪ್ರಕಟಿಸುವುದೇ ದುಸ್ತರವಾಗಿದೆ. ಸಂಪನ್ಮೂಲದ ಸಮಸ್ಯೆಯಿಂದ ಪತ್ರಿಕಾ ಸಂಪಾದಕರು ಜರ್ಝರಿತಗೊಂಡಿದ್ದಾರೆ. ಇಡೀ ದೇಶ ಕರೋನಾ ಸಂಕಷ್ಟದಲ್ಲಿರುವುದರಿAದಾಗಿ ಯಾವುದೇ ವಹಿವಾಟು, ಕಾರ್ಯಕ್ರಮಗಳು ಜರುಗದೇ ಖಾಸಗಿ ಜಾಹೀರಾತುಗಳು ದೊರಕುತ್ತಿಲ್ಲ. ಎಷ್ಟೋ ಸಂಪಾದಕರುಗಳು ಪತ್ರಿಕೆ ಪ್ರಕಟಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಸರ್ಕಾರ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತುಗಳನ್ನು ನೀಡಬೇಕೆಂದು ಒತ್ತಾಯಿಸಿದರು.  ರಾಜ್ಯಮಟ್ಟದ ಪತ್ರಿಕೆಗಳಿಗೆ ಜಾಹೀರಾತು ನೀಡುವ ಸರ್ಕಾರ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳನ್ನು ನಿರ್ಲಕ್ಷö್ಯ ಮಾಡುತ್ತಿದೆ. ರಾಜ್ಯ ಮಟ್ಟದ ಪತ್ರಿಕೆಗಳಿಗೆ ನೀಡುವ ಎಲ್ಲಾ ಜಾಹೀರಾತುಗಳನ್ನು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ನೀಡಬೇಕಾಗಿದೆ. ಇದರಿಂದ ಕನ್ನಡ ಭಾಷಾ ಸಣ್ಣ ಪತ್ರಿಕೆಗಳು ಜೀವಂತವಾಗಿ ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.  ಸಭೆಯಲ್ಲಿ ತಾರಾ ಮಂಡಲದ ಸಂಸ್ಥಾಪಕ, ಹಿರಿಯ ಪತ್ರಕರ್ತ ಚಳ್ಳಕೆರೆ ರ‍್ರಿಸ್ವಾಮಿ ಭಾಗವಹಿಸಿ ಮಾತನಾಡಿ, ಕನ್ನಡ ಭಾಷಾ ಪತ್ರಿಕೆಗಳು ಯಶಸ್ವಿಯಾಗಿ ಪ್ರಕಟಗೊಳ್ಳಲು ಸರ್ಕಾರ ನೆರವು ಕಲ್ಪಿಸಬೇಕಾಗಿದೆ. ಎಲ್ಲಾ ಕ್ಷೇತ್ರಕ್ಕೂ ಬೆಂಬಲ ನೀಡುವ ಸರ್ಕಾರ ಪತ್ರಿಕಾ ಕ್ಷೇತ್ರಕ್ಕೂ ಅದರಲ್ಲೂ ಸಣ್ಣ ಪತ್ರಿಕೆಗಳಿಗೆ ಹೆಚ್ಚಿನ ಸಹಾಯ ಮಾಡಬೇಕಾಗಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವವರು ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದರೇ, ಅಂತಹವರಿಗೆ ಹೆಚ್ಚಿನ ಸರ್ಕಾರಿ ಸೌಲಭ್ಯ ಕಲ್ಪಿಸಬೇಕಾಗಿದೆ. ಅಕ್ಷರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪರಿಶಿಷ್ಟರಿಗೆ, ಅಲ್ಪಸಂಖ್ಯಾತರಿಗೆ ಹೆಚ್ಚು ಸೌಲಭ್ಯ ಕೊಡುವುದು ತಪ್ಪಲ್ಲ. ಇವರಿಗೆ ಕಂಪ್ಯೂಟರ್ ಹಾಗೂ ಮುದ್ರಣ ಯಂತ್ರ ಖರೀದಿಗೆ ಹೆಚ್ಚು ಸಬ್ಲೀಡಿ ನೀಡಬೇಕು ಎಂದು ಹೇಳಿದರು.  ಸಭೆಯಲ್ಲಿ ಜಾಹೀರಾತು ನೀತಿ-2015 ಪುನರ್ ಪರಿಶೀಲನೆ, ಹಾಗೂ ಕಾಯ್ದೆಯಾಗಿ ರೂಪಿಸಲು ಒತ್ತಾಯಿಸಿ, ಇಡೀ ಜಿಲ್ಲೆಯನ್ನು ಗಡಿ ನಾಡ ಜಿಲ್ಲೆ ಎಂದು ಘೋಷಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಯಿತು.  ಕಲ್ಲಿನ ಕೋಟೆ ಸಂಪಾದಕ ಎಂ.ಹನೀಫ್ ಎಲ್ಲರನ್ನು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.