ಚಿತ್ರದುರ್ಗ ಜಿಲ್ಲಾ ಗೃಹರಕ್ಷಕ ದಳದವರಿಂದ ರಕ್ತದಾನ

 ಚಿತ್ರದುರ್ಗ.ನ.೧;  ಜಿಲ್ಲಾ ಗೃಹರಕ್ಷಕ ದಳದವರಿಂದ ವಾಸವಿ ಲ್ಯಾಬ್‌ನಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಗೃಹರಕ್ಷಕರು ಸ್ವಯಂ ಪ್ರೇರಿತರಾಗಿ 25 ಗೃಹರಕ್ಷಕರು ರಕ್ತದಾನ ಮಾಡಿದರು  ರಕ್ತದಾನ ಶಿಬಿರದ ಉದ್ಘಾಟನೆಯನ್ನು ಗೃಹರಕ್ಷಕದಳದ ಜಿಲ್ಲಾ ಕಮಾಂಡೆAಟ್ ಸಿ.ಕೆ ಸಂದ್ಯಾಪ್ರದೀಪ್ ಮಾತನಾಡಿ ರೋಗಿಗಳನ್ನು ಉಳಿಸಲು ರಕ್ತ ಅವಶ್ಯಕವಾಗಿರುವುದರಿಂದ ಅರೋಗ್ಯವಂತರು ಪ್ರತಿಯೊಬ್ಬರು ರಕ್ತದಾನ ಮಾಡಬಹುದಾಗಿದೆ ರಕ್ತದಾನ ಅಮೂಲ್ಯವಾಗಿದ್ದು ಅತ್ಯಂತ ಶ್ರೇಷ್ಟ ದಾನವಾಗಿದೆ ಕರೋನದಿಂದ ರಕ್ತಕೊಡುವುದಕ್ಕೆ ಯಾರು ಬರುತ್ತಿಲ್ಲ ಇದರಿಂದ ಅನೇಕ ರೋಗಿಗಳು ಸಾವಿಗೀಡಾಗುತ್ತಿರುವುದು ವಿಷಾದನೀಯವಾಗಿದೆ ಇಂತಹ ಕಷ್ಟದ ಸಂದರ್ಭದಲ್ಲಿ ಗೃಹರಕ್ಷಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಹಲವರು ಜೀವ ಉಳಿಸುತ್ತಿರುವ ಗೃಹರಕ್ಷಕ ಸಿಬ್ಬಂದಿಗಳಿಗೆ ಹಣ್ಣು ಹಂಪಲು ಹಾಗೂ ಸರ್ಟಿಪಿಕೇಟ್ ನೀಡಿ ಅಭಿನಂದಿಸಿದರುವೇದಿಕೆಯಲ್ಲಿ ಶ್ರೀವಾಸವಿ ಲ್ಯಾಬ್‌ನ ಡಾ.ಶ್ರೀನಿವಾಸಶೆಟ್ಟಿ ಹಾಗೂ ಉಷಾ ಶ್ರೀನಿವಾಸಶೆಟ್ಟಿ ಮತ್ತು ಗೃಹ ರಕ್ಷಕದಳದ ಯೂನಿಟ್ ಅಧಿಕಾರಿ ಸಿ.ಎನ್ ಕಾಂತರಾಜ್ ,ತಿಪ್ಪೇಸ್ವಾಮಿ ಉಪಸ್ಥಿತರಿದ್ದರು ಗೃಹರಕ್ಷಕ ದಳದ ಜಿಲ್ಲಾ ಭೋದಕರಾದ ತಿಪ್ಪೇಸ್ವಾಮಿ ಸ್ವಾಗತಿಸಿ ವಂದಿಸಿದರು.