ಚಿತ್ರದುರ್ಗ ಕರಾಗೃಹಕ್ಕೆ ಮುರುಘಾ ಶರಣರು

ಚಿತ್ರದುರ್ಗ,ಏ.29: ಫೋಕ್ಸೋ ಪ್ರಕರಣದಲ್ಲಿ ಮುರುಘಾಮಠದ ಡಾ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಲಯಕ್ಕೆ ಸೋಮವಾರ ಶರಣಾಗಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ‌ ಮೇಲೆ ಹೊರ ಬಂದಿದ್ದಾ ಮುರುಘಾ ಶರಣರಿಗೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿ, 7 ದಿನಗಳ ಒಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಸೋಮವಾರ 1 ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ಮುಂದೆ ಮುರುಘಾ ಶರಣರು ಹಾಜರಾದರು.


ಪೋಕ್ಸೋ ಪ್ರಕರಣದ ವಿಚಾರಣೆ ಮುಗಿಸಲು 4ತಿಂಗಳ ಅವಕಾಶ ನೀಡಿರುವ ಸುಪ್ರೀಂ ಕೋರ್ಟ್, ವಿಚಾರಣೆ ಮುಗಿಯುವ ವರೆಗೆ ಮುರುಘಾ ಸ್ವಾಮಿಗೆ ಮತ್ತೆ ಜೈಲು ವಾಸ ವಿಧಿಸಿತ್ತು.
1ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ಶಂಕರಪ್ಪ ನಿಂಬಣ್ಣ ಕಲ್ಕಣಿ ಅವರ ಮುಂದೆ ಹಾಜರಾದ ಬಳಿಕಾ, ವಿಚಾರಣೆ ನಡೆಸಿದ ನ್ಯಾಯಾಧೀಶರು ಮೇ 27 ರ ವರೆಗೆ ಮುರುಘಾ ಶರಣರಿಗೆ ನ್ಯಾಯಾಂಗ ಬಂಧನ ವಿಧಿಸಿತು.
ನ್ಯಾಯಾಧೀಶರ ಆದೇಶದ ಬಳಿಕಾ ಚಿತ್ರದುರ್ಗ ಡಿವೈಎಸ್ ಪಿ ದಿನಕರ್ ನೇತೃದಲ್ಲಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಶರಣರಿಗೆ ಆರೋಗ್ಯ ತಪಾಸಣೆ ನಡೆಸಿದರು. ಜಿಲ್ಲಾಸ್ಪತ್ರೆ ವೈಧ್ಯ ಡಾ.ದೇವರಾಜ್ ಅವರು ಶರಣರಿಗೆ ಬಿಪಿ, ಇಸಿಜಿ, ಶುಗರ್ ಸೇರಿ ಹಲವು ಪರೀಕ್ಷೆ ನಡೆಸಿ, ಎಲ್ಲಾ ಪರೀಕ್ಷೆಗಳು ನಾರ್ಮಲ್ ಎಂದು ವರದಿ ನೀಡಿದರು.
ಆರೋಗ್ಯ ತಪಾಸಣೆ ಮಾಡಿಸಿದ ಪೊಲೀಸರು ನಂತರ ಸಂಜೆ 6 ಗಂಟೆ ಸುಮಾರಿಗೆ ಜಿಲ್ಲಾ ಕಾರಾಗೃಹಕ್ಕೆ ಮುರುಘಾ ಶರಣರನ್ನು ಕರೆತಂದರು.
4 ತಿಂಗಳಲ್ಲಿ ಪ್ರಕರಣದ ವಿಚಾರಣೆ ಮುಗಿಸಲು ಸುಪ್ರೀಂ ಕೋರ್ಟ್ ಸೂಚಿಸಿರುವುದರಿಂದ ವಿಚಾರಣೆ ಮುಗಿಯುವ ವರೆಗೂ ಬಹುತೇಕ ಮುರುಘಾ ಶರಣರು ಜೈಲುವಾಸ ಅನುಭವಿಸಬೇಕಿದೆ.