
ಚಿತ್ರದುರ್ಗ.ಏ.೧೭; ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಬಿ.ಇ.ಜಗದೀಶ್ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ 12 ಗಂಟೆ ಸುಮಾರಿಗೆ ಪೂಜೆ ಸಲ್ಲಿಸಿದ ಬಿ.ಇ.ಜಗದೀಶ್ ದಂಪತಿಗಳು ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡರು.ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಜಗದೀಶ್ ಅಭಿಮಾನಿಗಳು ಮತ್ತು ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಆಮ್ ಆದ್ಮಿ ಪಕ್ಷದ ಗುರುತು ಪರಕೆಯನ್ನು ಹಿಡಿದ ಮಹಿಳೆಯರು ಮುಂದಿನ ಎಂಎಲ್ಎ ಜಗದೀಶ್ ಎಂಬ ಜಯ ಘೋಷಣೆಗಳೊಂದಿಗೆ ಬಿಡಿ ರಸ್ತೆಯ ಮೂಲಕ ಸಾಗಿ ಪ್ರವಾಸಿ ಮಂದಿರ ಮುಂಬಾಗದಲ್ಲಿರುವ ತಾಲ್ಲೂಕು ಕಚೇರಿಯನ್ನು ತಲುಪಿತು. ಜಗದೀಶ್ ಅವರಿಗೆ ಬೆಂಬಲವಾಗಿ ಪತ್ನಿ ಶೀಲ, ಮಗ ಆಕಾಶ್, ವಿನಯ್ ಕುಮಾರ್, ಪಕ್ಷದ ಜಿಲ್ಲಾ ಕಾರ್ಯದರ್ಶಿ ತಿಪ್ಪೇಸ್ವಾಮಿ, ಗೂಳಿ ರವಿಕುಮಾರ್ ಲಿಂಗಾರಜು, ಶುಬಾಶ್, ರಾಜಪ್ಪ, ತಿಮ್ಮರೆಡ್ಡಿ ಹುಲ್ಲೂರು ಸೇರಿದಂತೆ ಆಮ್ ಆದ್ಮಿ ಪಕ್ಷದ ಇನ್ನಿತರೆ ಮುಖಂಡರು ಪಾಲ್ಗೊಂಡಿದ್ದರು.