ಚಿತ್ರದುರ್ಗದಲ್ಲಿ ಸಂಸ್ಕಾರ ಭಾರತೀ ಶಿವಮೊಗ್ಗ ವಿಭಾಗ ಮಟ್ಟದ ಬೈಠಕ್ 

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಮಾ.೨೬: ನಗರದ ಜ್ಞಾನಭಾರತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ  ಸಂಸ್ಕಾರ ಭಾರತೀ ಶಿವಮೊಗ್ಗ ವಿಭಾಗ ಮಟ್ಟದ ಬೈಠಕ್ ಆಯೋಜಿಸಲಾಗಿತ್ತು.ಬೈಠಕ್ ನ ಅಧ್ಯಕ್ಷತೆಯನ್ನು ಚಿತ್ರದುರ್ಗ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಟಿ.ಕೆ. ನಾಗರಾಜ್ ವಹಿಸಿದ್ದರು. ದಕ್ಷಿಣ ಪ್ರಾಂತ ಪ್ರಧಾನ  ಕಾರ್ಯದರ್ಶಿ ಡಾ. ಕೆ. ರಾಜೀವ್ ಲೋಚನ್  ಹಾಗೂ ವಿಭಾಗದ ಕಾರ್ಯದರ್ಶಿ ಟಿ.ಎನ್. ಮಾರುತಿ ಮೋಹನ್  ವಿಭಾಗದ ಚಿತ್ರದುರ್ಗ ಹಾಗೂ ದಾವಣಗೆರೆ ಸಂಸ್ಕಾರ ಭಾರತೀ ಜಿಲ್ಲಾ ಸಮಿತಿಗಳು ನಡೆಸಿಕೊಂಡು ಬರಬೇಕಾಗಿರುವ  ಸದಸ್ಯತ್ವ ನೋಂದಣಿ, ವಾರ್ಷಿಕಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಪ್ರಮುಖವಾಗಿ ‘ಲೋಕ ಜಾಗೃತಿ ಕಲ್ಯಾಣ ಅಭಿಯಾನ’ದ ವಿಷಯ ಕುರಿತು ಮಾಹಿತಿ ನೀಡಿದರು.ದಾವಣಗೆರೆ ಜಿಲ್ಲಾ ಸಂಸ್ಕಾರ ಭಾರತೀ ಅಧ್ಯಕ್ಷ ಎ. ಮಹಾಲಿಂಗಪ್ಪ ಉಪಸ್ಥಿತರಿದ್ದರು.ಚಿತ್ರದುರ್ಗ ಜಿಲ್ಲಾ ಸಮಿತಿ ಕಾರ್ಯದರ್ಶಿ ಉಮೇಶ್ ವೀರಣ್ಣ ತುಪ್ಪದ್  ತಮ್ಮ ಸಮಿತಿಯಿಂದ ಕಳೆದ ಸಾಲಿನಲ್ಲಿ ನಡೆಸಿದ ಕಾರ್ಯಕ್ರಮಗಳ ವರದಿ ಹಾಗೂ ಈ ಸಾಲಿನಲ್ಲಿ ಕೈಗೊಳ್ಳಲಿರುವ ಕಾರ್ಯಚಟುವಟಿಕೆಗಳ ಪಟ್ಟಿಯನ್ನು ವಾಚಿಸಿದರು. ದಾವಣಗೆರೆ ಜಿಲ್ಲಾ ಸಮಿತಿ  ಕಾರ್ಯದರ್ಶಿ ಬಿ. ದಿಳ್ಯಪ್ಪ ಕಳೆದ ಸಾಲಿನ ವಾರ್ಷಿಕ ವರದಿಯನ್ನು ಸಭೆಯ ಮುಂದೆ ಇರಿಸಿದರು.  ಹಾಗೂ ಮಹಿಳಾ ಕಾರ್ಯದರ್ಶಿ ದೇವಿಕ ಸುನೀಲ್ ಮುಂದಿನ ಯೋಜನೆಗಳ ವಿವರ ನೀಡಿದರು.ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ಸಮಿತಿಯ  ಸಂಘಟನಾ ಕಾರ್ಯದರ್ಶಿ ನಾಗರಾಜ್ ಸಂಗಮ್, ಎಸ್. ಗುರುರಾಜ್, ಮಹಿಳಾ ಕಾರ್ಯದರ್ಶಿ ಹೆಚ್.ಎನ್. ವರಲಕ್ಷ್ಮಿ, ನೃತ್ಯ ವಿಧಾ ಪ್ರಮುಖ್ ನಂದಿನಿ ಶಿವಪ್ರಕಾಶ್, ನಿರ್ದೇಶಕರಾದ ಎನ್. ಸೂರ್ಯನಾರಾಯಣ್, ಲಕ್ಷ್ಮೀ ಶ್ರೇಷ್ಠಿ ಹಾಗೂ ದಾವಣಗೆರೆ ಸಂಸ್ಕಾರ ಭಾರತೀ ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಸಹನಾ ರವಿ, ಸಾಹಿತ್ಯ ವಿಧಾನ ಪ್ರಮುಖ್ ಬಾ.ಮ. ಬಸವರಾಜಯ್ಯ ಹಾಗೂ ಸಂಗೀತ ವಿಧಾ ಪ್ರಮುಖ್ ರುದ್ರಾಕ್ಷಿ ಬಾಯಿ ಉಪಸ್ಥಿತರಿದ್ದರು.ಆರಂಭದಲ್ಲಿ ರುದ್ರಾಕ್ಷಿ ಬಾಯಿ ಧ್ಯೇಯ ಗೀತೆ ಹಾಡಿದರು. ಉಮೇಶ್ ವೀರಣ್ಣ ತುಪ್ಪದ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.