ಚಿತ್ರದುರ್ಗದಲ್ಲಿ ತಂಪಾದ ಮಳೆ

ಚಿತ್ರದುರ್ಗ,ಜೂ.೫: ಜಿಲ್ಲೆಯಲ್ಲಿ  ಬಿದ್ದ ಮಳೆಯ ವಿವರದನ್ವಯ ಹಿರಿಯೂರು ತಾಲ್ಲೂಕಿನ ಇಕ್ಕನೂರಿನಲ್ಲಿ 70.4 ಮಿ.ಮೀ ಮಳೆಯಾಗಿದ್ದು ಇದು ಜಿಲ್ಲೆಯ ಅತೀ ಹೆಚ್ಚು ಮಳೆಯಾಗಿದೆ.
 ಚಿತ್ರದುರ್ಗ 1 ರಲ್ಲಿ 9.6, 2 ರಲ್ಲಿ 3.7, ತುರುವನೂರು 6.4, ಐನಹಳ್ಳಿ 7.8, ಚಳ್ಳಕೆರೆ 32, ಪರಶುರಾಂಪುರ 18.2, ತಳಕು 7.2, ನಾಯಕನಹಟ್ಟಿ 45.4, ಡಿ.ಮರಿಕುಂಟೆ 58.2, ಮೊಳಕಾಲ್ಮುರು 7, ರಾಯಾಪುರ 15.2, ಬಿ.ಜಿ.ಕೆರೆ 6.2, ಹಿರಿಯೂರು 54.6, ಬಬ್ಬೂರು 63.2, ಈಶ್ವರಗೆರೆ 54.8, ಸೂಗೂರು 25.2, ಹೊಸದುರ್ಗ 32.2, ಬಾಗೂರು 10.3, ಶ್ರೀರಾಂಪುರ 11, ಮಾಡದಕೆರೆ 28, ಹೊಳಲ್ಕೆರೆ 9.2, ರಾಮಗಿರಿ 15.4, ಚಿಕ್ಕಜಾಜೂರು 6.4, ಬಿ.ದುರ್ಗ 8.2,ಹೆಚ್.ಡಿ.ಪುರ 3.6, ತಾಳ್ಯ 6.2 ಮಿ.ಮೀ ಮಳೆಯಾಗಿದೆ.