ಚಿತ್ರದುರ್ಗದಲ್ಲಿ ಜಾನುವಾರು ಜಾತ್ರೆ

ಚಿತ್ರದುರ್ಗ : ಇಂದಿನ ಜಾತ್ರೆಗಳಲ್ಲಿ ಜನಗಳ ಸಂಖ್ಯೆ ಹೆಚ್ಚಾಗುತ್ತಿದೆ. ದನಗಳ ಸಂಖ್ಯೆ ಕಮ್ಮಿಯಾಗಿದೆ. ಮಾನವ ಮಕ್ಕಳ ಪಾಲನೆ ಪೋಷಣೆಗೆ ಸೀಮಿತವಾಗಿದ್ದಾನೆ. ಸಸ್ಯಪಾಲನೆ, ಪಶುಪಾಲನೆಯನ್ನು ಬಿಟ್ಟಿದ್ದಾನೆ. ದನಗಳ ಸಂಖ್ಯೆ ಕಮ್ಮಿಯಾಗಿ ಹಾಲು ಉತ್ಪಾದನೆ ಕಮ್ಮಿಯಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ನಗರಕ್ಕೆ ಸಮೀಪದ ಶೀಬಾರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಹಾಗು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಜರುಗಿದ ಜಾನುವಾರು ಜಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಗುರುಪಾದ ಸ್ವಾಮಿಗಳ ಸ್ಮರಣೆಗಾಗಿ ಈ ಜಾತ್ರೆಯನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಗುರುಪಾದ ಸ್ವಾಮಿಗಳು ತಪಸ್ವಿಗಳು. ಅವರು ಗವಿಮಠದಲ್ಲಿ ಏಕಾಂತವಾಗಿ ಧ್ಯಾನವನ್ನು ಮಾಡಿ ಸಮಾಜದಲ್ಲಿ ಶಾಂತಿ, ಸಹನೆ, ಬೋಧನೆ ಮಾಡಿದ್ದಾರೆ. ಮುರುಘಾಮಠದ ಗುರುಗಳಾಗಿ ಸಮಾಜ ಸೇವೆ ಮಾಡಿದ್ದಾರೆ. ಅವರ ಗದ್ದುಗೆಯು ಶ್ರೀಮಠದಲ್ಲಿದೆ. ಜಯದೇವ, ಜಯವಿಭವ ಮತ್ತು ಮಲ್ಲಿಕಾರ್ಜುನ ಶ್ರೀಗಳು ಇವರೆಲ್ಲರು ಗದ್ದುಗೆಯಲ್ಲಿ ಪೂಜೆ ಪ್ರಸಾದ ಧ್ಯಾನವನ್ನು ಮಾಡಿದ್ದಾರೆ. ಬೇಸಿಗೆ ಕಾಲದಲ್ಲಿ ಜನರಿಗೆ ಮಜ್ಜಿಗೆ ಕೊಡಿ. ಹಾಲು, ಮೊಸರು, ಬೆಣ್ಣೆ, ತುಪ್ಪ, ಪೇಡಾ ತಿನಿಸುಗಳಿಗೆ ಹಾಲು ಅತ್ಯವಶ್ಯಕ. ಹೀಗಾಗಿ ಪಶುಪಾಲನೆ ಅತಿಮುಖ್ಯವಾಗಿದ್ದು ಎತ್ತು, ಎಮ್ಮೆ, ಆಕಳು, ಕುರಿ, ಮೇಕೆಗಳನ್ನು ಸಾಕಿ ಕೃಷಿ ಕೃತ್ಯಗಳಿಗೆ ಹೆಚ್ಚಿನ ಮಹತ್ವ ಕೊಟ್ಟು ಪಶುಪಾಲನೆಯಲ್ಲಿ ತೊಡಗಿಸಿಕೊಳ್ಳಿ ಎಂದರು.ಜಿ.ಪಂ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸುರೇಶ್‌ಬಾಬು ,ಗ್ರಾ.ಪಂ ಸದಸ್ಯ ರಾಮಾಂಜನೇಯ ಇದ್ದರು.ಇದೇ ಸಂದರ್ಭದಲ್ಲಿ ಶ್ರೀಗಳು ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಿದರು. ಜಾತ್ರೆಯಲ್ಲಿ ಹಳ್ಳಿಕಾರ್, ಅಮೃತ್ ಮಹಲ್ ಇನ್ನಿತರೆ ತಳಿಗಳ 250ಕ್ಕು  ಹೆಚ್ಚು ಜೋಡಿ ಎತ್ತುಗಳು ಭಾಗವಹಿಸಿವೆ.