ಚಿತ್ರದುರ್ಗಕ್ಕೆ ಹೈಟೆಕ್ ಬಸ್‌ಸ್ಟಾಂಡ್ – ಶಿವಯೋಗಿ ಕಳಸದ್

ಚಿತ್ರದುರ್ಗ.ನ.೬; ಕೊರೋನಾ ಪೀಡಿತ ಅವಧಿಯಲ್ಲಿ ವಿಳಂಬ ಗತಿಯಲ್ಲಿ ಸಾಗಿದ ರಾಜ್ಯ ರಸ್ತೆ ಸಾರಿಗೆ ನಿಗಮದ ಅಭಿವೃದ್ದಿ ಕಾರ್ಯಗಳು ಏಪ್ರಿಲ್ -೨೦೨೧ರಿಂದ ಚುರುಕುಗೊಳ್ಳಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ತಿಳಿಸಿದರು. ಅವರು ಜಿಲ್ಲೆಗೆ ಭೇಟಿ ನೀಡಿ ಹೊಳಲ್ಕೆರೆ ಬಸ್ ನಿಲ್ದಾಣ ಹಾಗೂ ಬಸಾಪುರದಲ್ಲಿ ಪೂರ್ಣಗೊಂಡ ಚಾಲಕ ತರಬೇತಿ ಕೇಂದ್ರ ಪರಿಶೀಲನೆ ನಡೆಸಿ ಉದ್ಘಾಟನೆಗೆ ಸಿದ್ದವಾಗಿವೆ ಎಂದು ತಿಳಿಸಿದರು. ಬಸಾಪುರದಲ್ಲಿ ೧೦ ಎಕರೆ ವಿಸ್ತೀರ್ಣದಲ್ಲಿ ತರಬೇತಿ ಕೇಂದ್ರದ ವ್ಯಾಪ್ತಿಯಲ್ಲಿ ನೂರು ಜನ ಅಭ್ಯರ್ಥಿಗಳು ೨೦ ಜನ ತಂಡದಂತೆ ತರಬೇತಿ ಪಡೆಯಲಿದ್ದಾರೆ. ೬ ಕ್ಲಾಸ್ ರೂಂ ಇದ್ದು ೬ ಸಿಂಗಲ್ ರೂಂ ಒಳಗೊಂಡಿದೆ. ರಾಜ್ಯದಲ್ಲಿ ಇದು ೫ನೇ ಸುಸಜ್ಜಿತ ತರಬೇತಿ ಕೇಂದ್ರವಾಗಿದೆ. ಕೌಶಲ್ಯ ಅಭಿವೃದ್ದಿ ಇಲಾಖೆಯಿಂದ ನಮ್ಮ ಸಂಸ್ಥೆವತಿಯಿಂದ ಉಚಿತ ಲಘುವಾಹನ ತರಬೇತಿ ಕೇಂದ್ರ ಸ್ಥಾಪನೆಗೊಳ್ಳಲಿದೆ ಆಸಕ್ತರು ಮಹಿಳೆಯರು ಪರುಷರು ಆನ್‌ಲೈನ್ ಮೂಲಕ ಅರ್ಜಿ ಹಾಕಿಕೊಳ್ಳಬಹುದು. ತರಬೇತಿ ಪಡೆದವರಿಗೆ ಲೈಸನ್ಸ್ ನೀಡಲಾಗುವುದು. ಒಂದು ತಿಂಗಳ ಅವಧಿಯ ಈ ಸಂದರ್ಭದಲ್ಲಿ ವಸತಿ ಊಟ ಉಚಿತವಾಗಿ ನೀಡಲಾಗುವುದು.
ಐತಿಹಾಸಿಕ ನಗರ ಚಿತ್ರದುರ್ಗ ನಗರದಲ್ಲಿ ಬಹುದಿನಗಳಿಂದ ಬೇಡಿಕೆಯಾದ ಹೈಟೆಕ್ ಬಸ್‌ಸ್ಟಾಂಡ್ ನಿರ್ಮಾಣಕ್ಕೆ ತಯಾರಿ ನಡೆದಿದೆ. ಡಿಪೋ ಜಾಗದಲ್ಲಿ ಹೈಟೆಕ್ ಬಸ್‌ಸ್ಟಾಂಡ್ ನಿರ್ಮಾಣ ಮಾಡಿ ರಾಜ್ಯದ ಕೇಂದ್ರ ಬಿಂದು ಆದ ಚಿತ್ರದುರ್ಗ ಬಸ್‌ಸ್ಟಾಂಡ್‌ನ್ನು ನವೀಕರಣಗೊಳಿಸಲಾಗುವುದು. ಮೊಳಕಾಲ್ಮೂರಿನಲ್ಲಿ ಘಟಕ ಸ್ಥಾಪನೆಗೆ ಜಿಲ್ಲಾಧಿಕಾರಿಗಳು ಭೂಮಿ ನೀಡಿದ್ದಾರೆ. ಸಮಾಜ ಕಲ್ಯಾಣ ಸಚಿವರಾದ ಶ್ರೀರಾಮುಲು ಹಾಗೂ ಇದೇ ಜಿಲ್ಲೆಯವರಾದ ಶಾಸಕ ಎಂ ಚಂದ್ರಪ್ಪನವರು ಸಂಸ್ಥೆಯ ಅಧ್ಯಕ್ಷರಾಗಿದ್ದು ಇವರ ನೆರವಿನಿಂದ ಸಮಗ್ರ ಅಭಿವೃದ್ದಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿಗಳಾದ ಕವಿತ.ಎಸ್ ಮನಿಕೇರಿಯವರು ಸಾರಿಗೆ ಸಂಸ್ಥೆಯ ಸಮಗ್ರ ಅಭಿವೃದ್ದಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು. ಸಂಸ್ಥೆಯ ಮುಖ್ಯ ಇಂಜನೀಯರ್ ಹಾಗೂ ಚಿತ್ರದುರ್ಗ ವಿಭಾಗೀಯ ಅಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದರು.