ಚಿತ್ರಕಲೆ ಸ್ಪರ್ಧೆ ಫಲಿತಾಂಶ

ಧಾರವಾಡ ಜೂ.8: ಸುದಿಶಾ ಇವೆಂಟ್ಸ್‍ನಿಂದ ಆನ್‍ಲೈನ್‍ನಲ್ಲಿ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಇದರಲ್ಲಿ ಸುಮಾರು 40 ಕ್ಕೂ ಹೆಚ್ಚು ಮಕ್ಕಳು, ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶ್ರೇಯಸ್ ರಟಗಲ್,ದ್ವೀತಿಯಸ್ಥಾನವನ್ನು ಶ್ರೇಯ ಪಾಟೀಲ್,ತೃತೀಯ ಸ್ಥಾನವನ್ನು ರಿಶಬ್ ಆರ್ ಶಿರೆಕಾರ್ ಪಡೆದರು. ನಿರ್ಣಾಯಕರಾಗಿ, ರಾಘವೇಂದ್ರ ಕುಂದಗೋಳ, ಹೀನಾ ಜಮಖಂಡಿ, ಅಚ್ಚುಕಟ್ಟಾಗಿ ನಿರ್ವಹಿಸಿದರು.
ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವಲ್ಲಿ, ಸುದಿಶಾ ಇವೆಂಟ್ಸ್ ಮುಖ್ಯ ಪಾತ್ರವಹಿಸಿದೆ. ಸುದಿಶಾ ಇವೆಂಟ್ಸ್ ಕಾರ್ಯವ್ಯಾಪ್ತಿ ಧಾರವಾಡದಲ್ಲಿ, ಅಷ್ಟೆ ಅಲ್ಲದೆ ಗದಗ, ಬೆಳಗಾವಿ, ವಿಜಾಪುರ್, ದೂರದ ಅಡೋನಿ (ಆಂದ್ರಪ್ರದೇಶ) ಓಮನ್ ದೇಶದಲ್ಲಿ, ತನ್ನ ಕಾರ್ಯ ವ್ಯಾಪ್ತಿ, ಬೆಳಿಸಿಕೊಂಡು 76ನೇ ಆನ್‍ಲೈನ್, ಕಾರ್ಯಕ್ರಮಗಳನ್ನ ಮಾಡಿರುವದು ಹೆಮ್ಮೆಯ ವಿಷಯವಾಗಿದೆ.