ಚಿತ್ರಕಲೆ ಮೂಲಕ ವಿದ್ಯಾರ್ಥಿಗಳಿಂದ ವಿನೂತನ ನಾಗಪಂಚಮಿ ಆಚರಣೆ

ಕಲಬುರಗಿ,ಆ.1: ನಾಗರಪಂಚಮಿ ನಿಮಿತ್ಯ ಚಿತ್ರಕಲಾ ಪ್ರದರ್ಶನದ ಮೂಲಕ ಆರ್ಯನ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿನೂತನವಾಗಿ ನಾಗರಪಂಚಮಿಯನ್ನು ಆಚರಿಸಿದರು.
ನಗರದ ಆರ್ಯನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಗರ ಪಂಚಮಿ ಹಬ್ಬದ ನಿಮಿತ್ಯ 5ನೇ ತರಗತಿರಿಂದ 9ನೇ ತರಗತಿಯ ಮಕ್ಕಳಲ್ಲಿ ಕಲೆಯನ್ನು ಅರಳಿಸಲು ಮತ್ತು ಅವರಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರುವ ಹಿನ್ನೆಲೆಯಲ್ಲಿ ನಾಗರ ಪಂಚಮಿ ಭಾರತೀಯ ಹಬ್ಬದ ವಿಷಯ ಕುರಿತಂತೆ ಚಿತ್ರಕಲೆ ಚಿತ್ರಣ ಮತ್ತು ಅವುಗಳ ಪ್ರದರ್ಶನದ ಮೂಲಕ ಮಕ್ಕಳ ಕಲೆಗೆ ಪ್ರೇರಣೆಯಾಯಿತು.
ಕಲೆ ಪ್ರತಿಯೊಬ್ಬರಲ್ಲೂ ಹುಟ್ಟಿನಿಂದ ಬರುತ್ತದೆ. ಅದನ್ನು ಅರಳಿಸಲು ಪ್ರೇರಣೆ ಮತ್ತು ಪ್ರೋತ್ಸಾಹ ಅಗತ್ಯ. ಈ ಎರಡನ್ನೂ ಪೋಷಕರು ಮತ್ತು ಶಾಲೆಗಳಲ್ಲಿ ಶಿಕ್ಷಕರು, ಶಿಕ್ಷಣ ಸಂಸ್ಥೆಯವರು ನೀಡಬೇಕಾಗುತ್ತದೆ. ಆರ್ಯನ್ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು, ನಾಗರ ಪಂಚಮಿ ಹಬ್ಬದ ಈ ಸಂದರ್ಭದಲ್ಲಿ ಮಕ್ಕಳ ಕಲ್ಪನೆಗಳನ್ನು ಅರಳಿಸುವ ಹಿನ್ನೆಲೆಯಲ್ಲಿ, ನಾಗರ ಪಂಚಮಿ ಹಬ್ಬದ ಕುರಿತು ಚಿತ್ರಗಳನ್ನು ಬಿಡಿಸಲು ಅವಕಾಶ ಕಲ್ಪಿಸಿದರು. ಇದರ ಉದ್ದೇಶ ಚಿತ್ರಕಲೆಯಲ್ಲಿ ಮಕ್ಕಳು ಬೆಳೆಯುವುದರೊಂದಿಗೆ ನಾಗರ ಪಂಚಮಿ ಹಬ್ಬದ ಕುರಿತು ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಲು ಪ್ರೇರಪಿಸಿತು.
ಶಾಲೆಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಿಂದ ವಿವಿಧ ಸಂಸ್ಕøತಿಯ ಹಿನ್ನೆಲೆಯಲ್ಲಿ ಬಂದಿರುವ ಮಕ್ಕಳಿರುತ್ತಾರೆ. ಆದಾಗ್ಯೂ, ಕಲೆಗೆ ಯಾವುದೇ ಜಾತಿ, ಧರ್ಮದ ಹಂಗಿಲ್ಲ. ಆದ್ದರಿಂದ ಇಲ್ಲಿ ಕಲೆಯನ್ನು ಮೂಲವಾಗಿಟ್ಟುಕೊಂಡು ಭಾರತೀಯ ಸಂಸ್ಕøತಿಯ ಈ ನಾಗರ ಪಂಚಮಿ ವಿಷಯ ಕುರಿತು ಚಿತ್ರಗಳನ್ನು ರಚಿಸುವ ಮೂಲಕ ಮಕ್ಕಳಿಗೆ ಸಂಸ್ಕøತಿಯ ಪರಿಚಯ ಮಾಡಿಕೊಡುವುದರೊಂದಿಗೆ ಅವರಲ್ಲಿ ಸೂಪ್ತವಾಗಿರುವ ಕಲೆಯನ್ನು ಅರಳಿಸುವುದು. ಮಕ್ಕಳು ತಮ್ಮ ಕಲ್ಪನೆಗೆ ಅನುಗುಣವಾಗಿ ಮತ್ತು ತಮಗೆ ಬಾಲ್ಯದಿಂದಲೂ ಮನೆಗಳಲ್ಲಿ, ನೆರೆಹೊರೆಗಳಲ್ಲಿ ಆಚರಿಸಿಕೊಂಡು ಬಂದಿರುವ ನಾಗರ ಪಂಚಮಿ ಹಬ್ಬ ಕುರಿತು ಕ್ಯಾನ್‍ವಾಸ್ ಮೇಲೆ ಚಿತ್ರಗಳನ್ನು ಬಿಡಿಸುವ ಮೂಲಕ ತಮ್ಮ ಕಲೆಯನ್ನು ಅನಾವರಣಗೊಳಿಸಿದರು.
ಹೌದು, ಇದೊಂದು ಅದ್ಭುತ ಕಲ್ಪನೆ. ಕಲೆಯೊಂದಿಗೆ ಸಂಸ್ಕøತಿಯ ಪರಿಚಯ ಮತ್ತು ಅವರ ಕಲೆಯನ್ನು ಬೆಳಕಿಗೆ ತರುವುದು ಮುಂದೆ ಅವರು ತಮ್ಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಇದೊಂದು ಸುವರ್ಣಾವಕಾಶ. ಇದನ್ನು ಶಾಲೆಯವರು ಮತ್ತು ಶಿಕ್ಷಕರು ಏರ್ಪಡಿಸಿರುವುದು ಸ್ವಾಗತಾರ್ಹ ಶೈಕ್ಷಣಿಕ ಬೆಳವಣಿಗೆಯಾಯಿತು.
ಮಕ್ಕಳು ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಅವರ ಹಳ್ಳಿಗಳಲ್ಲಿ ಯಾವ ರೀತಿ ನಾಗರ ಪಂಚಮಿ ಹಬ್ಬ ಆಚರಿಸಲಾಗುತ್ತದೆ ಎಂಬುದನ್ನು ಚಿತ್ರಕಲೆ ಮೂಲಕ ಚಿತ್ರಿಸಿ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಿದರು. ಮಕ್ಕಳು ಬಿಡಿಸಿರುವ ಚಿತ್ರಕಲಾ ಕೃತಿಗಳ ಪ್ರದರ್ಶನ ಮಾಡಲಾಯಿತು. ಶಾಲೆಯ ಅಧ್ಯಕ್ಷ ಮತ್ತು ಮಾಜಿ ಮಹಾಪೌರ ಸಂಜಯ ಸಿಂಗ್, ಪ್ರಿನ್ಸಿಪಾಲ್, ಸಿಬ್ಬಂದಿ ವರ್ಗದವರು ಮಕ್ಕಳ ಅಪ್ರತಿಮ ಪ್ರತಿಭೆಯನ್ನು ಕಂಡು ಸಂತೋಷಪಟ್ಟರು.
ನಾಗರ ಕಟ್ಟೆ, ನಾಗಪ್ಪನಿಗೆ ಹಾಲು ಎರೆಯುವುದು, ಹಾವಿನ ಹುತ್ತಿಗೆ ಪೂಜೆ ಮಾಡುವುದು, ಕೊಬ್ಬರಿ ಬಟ್ಟಲಿನ ಬುಗುರಿ ಆಟ, ಹೆಂಗಳೆಯರು ಜೋಕಾಲಿ ಆಡುವುದು ಮುಂತಾದ ಸನ್ನಿವೇಷಗಳನ್ನು ಮಕ್ಕಳು ತಾವು ನೋಡಿರುವದನ್ನು ತಮ್ಮ ಕಲ್ಪನೆಯಂತೆ ಚಿತ್ರಿಸಿ, ಅಪ್ರತಿಮ ಪ್ರತಿಭೆಯನ್ನು ಮೆರೆದರು.
ಮಕ್ಕಳಲ್ಲಿರುವ ಪ್ರತಿಭೆಗೆ ಜೀವ ತುಂಬುವ ಮತ್ತು ಅದನ್ನು ಬೆಳೆಯಲು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಇಂತಹ ಒಂದು ಪ್ರದರ್ಶನ ಅತ್ಯಂತ ಶ್ಲಾಘನೀಯ. ಎಲ್ಲ ಮಕ್ಕಳೂ ಪ್ರದರ್ಶನದಲ್ಲಿ ಪಾಲ್ಗೊಂಡಿರುವುದು, ಅವರಲ್ಲಿರುವ ಉತ್ಸಾಹಕ್ಕೆ ಸಾಕ್ಷಿಯಾಯಿತು.