ಚಿತ್ರಕಲೆ ಪ್ರೋತ್ಸಾಹಿಸಿ: ಮಕಾಳಿ


ಹುನಗುಂದ,ಸೆ.26: ಪ್ರತಿಯೊಬ್ಬರು ತಮ್ಮ ವೃತ್ತಿಯನ್ನು ಪ್ರೀತಿಸಬೇಕು ಅದರಂತೆ ಗೌರವಿಸಬೇಕು. ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಅವರ ಚಿತ್ರಕಲಾ ಆಸಕ್ತಿಗೆ ಪ್ರೋತ್ಸಾಹವನ್ನು ಕೊಡಬೇಕೆಂದು ಹಿರಿಯ ಚಿತ್ರಕಲಾವಿದ ಕೆ.ಕೆ.ಮಕಾಳಿ ಹೇಳಿದರು.
ಅವರು ನಗರದ ಆದರ್ಶ ವಿದ್ಯಾಲಯದಲ್ಲಿ ತಾಲೂಕು ಚಿತ್ರಕಲಾ ಶಿಕ್ಷಕರ ಸಂಘ ಏರ್ಪಡಿಸಿದ ಒಂದು ದಿನದ ಚಿತ್ರಕಲಾ ಶಿಕ್ಷಕರ ವಿಷಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಸರೋದೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎಸ್.ಬಿ.ಅರಕೇರಿ ಅತಿಥಿಯಾಗಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಚಿತ್ರಕಲಾ ಶಿಕ್ಷಕರಾದ ಜೆ.ಆರ್.ಉಪನಾಳ, ಎಸ್.ಎಸ್.ಇದ್ದಲಗಿ, ಎನ್.ಎನ್.ಪತ್ತಾರ ಹಾಗೂ ಬಿ.ಎಸ್.ಕಂಠಿ ಅವರನ್ನು ಸತ್ಕರಿಸಲಾಯಿತು. ನಂತರ ಮಕಾಳಿ ಕಲಾಕೃತಿಯೊಂದನ್ನು ರಚಿಸಿದರು. ಶಿವಶಂಕರ ಪೋಚಗುಂಡಿ ಸ್ವಾಗತಿಸಿದರು. ಮೇಘಾ ಚೆನ್ನಪ್ಪನವರ ನಿರೂಪಿಸಿದರು. ಡಿ.ಎಂ.ಮೂಲಿ ವಂದಿಸಿದರು.