ಚಿತ್ರಕಲೆಯಲ್ಲಿ ಭರವಸೆ ಮೂಡಿಸಿರುವ ರಶ್ಮಿ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ಸೆ.07: ಪಟ್ಟಣದ ಪಧವಿಧರ ಯುವತಿ ರಶ್ಮಿ ಚಿತ್ರಕಲೆಯನ್ನು ಕರಗತಮಾಡಿಕೊಂಡು ವಿವಿಧ ಚಿತ್ರಕಲೆಗಳನ್ನು ರೂಢಿಸಿಕೊಂಡು ಸಾವಿರಾರು ಚಿತ್ರಗಳನ್ನು ಬರೆದಿದ್ದು, ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
    ರಶ್ಮಿ ತಾಯಿ ರೇಖಾ ಮೂಲತಃ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಿಂಜಾರ ಗೇರಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿಯಲ್ಲಿರುವ ಚಿತ್ರಕಲೆಯ ಕಲೆಯು ಕರಗತ ಮಾಡಿಕೊಂಡು ನಾಲ್ಕನೇ ವಯಸ್ಸಿನಿಂದಲೇ ಚಿತ್ರ ಕಲೆಯಲ್ಲಿ ತೊಡಗಿಸಿಕೊಂಡಿದ್ದು, ಕಳೆದೆರಡು ವರ್ಷಗಳಿಂದ ಪ್ರತಿದಿನ ಸಂಜೆ ಶಾಲೆಯ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿತ್ರಕಲೆಯ ತರಬೇತಿಯನ್ನು ನೀಡುತ್ತಿದ್ದಾರೆ.
   ಚಿತ್ರಕಲೆಯ ವಿವಿಧ ಪ್ರಕಾರಗಳಾದ ವಸ್ತುಚಿತ್ರ, ಸರಳಗೈ ಚಿತ್ರ, ನಿಸರ್ಗಚಿತ್ರ, ವ್ಯಕ್ತಿಭಾವಚಿತ್ರ, ಪೇಪರ್ ಕ್ರಾಫ್ಟ್, ನೃತ್ಯಕಲೆ, 2ಡಿ ಡಿಜೈನ್ (ಪೆನ್‍ನಿಂದ), ಸ್ಕಾಲ್ಫ್ ಚರಲ್ ಪೇಂಟಿಂಗ್ (ವಾಲ್ ಪುಟ್ಟಿಯಿಂದ) ,ಆಯಿಲ್ ಪೇಸ್ಟ್ ನಿಂದ ವಸ್ತು ಚಿತ್ರ, ನಿಸರ್ಗ ಚಿತ್ರ, ಕಮಲ, ಮೀನಿನ ಚಿತ್ರ, ವಾಲ್‍ಪುಟ್ಟಿಯಿಂದ ಮಾದರಿ ಚಿತ್ರಗಳು ಕ್ಯಾನ್ವಾಸ್ ಪೇಂಟಿಂಗ್, ಮೆಹಂದಿ ಮತ್ತು ಚಿತ್ರಕಲೆ, ರಂಗೋಲಿ, ಕ್ರಾಫ್ಟ್, ಮಧುಬನಿ, ವಾರ್ಲಿ ಕಲೆ, ಕ್ಲೇಮಾಡಲಿಂಗ್, ಕೋಲಾಜ್ ಕಲೆ ರೂಢಿಸಿಕೊಂಡಿದ್ದು, ಈ ಮೇಲಿನ ಎಲ್ಲಾ ಚಿತ್ರಕಲೆಗಳನ್ನು ರಚಿಸಲು ವಾಟರ್ ಕಲರ್ (ಜಲವರ್ಣ, ತೈಲವರ್ಣ,) ಕಚ್ಚಾವಸ್ತುಗಳನ್ನು, ಅರ್ಕೆಲಿಕ್, ಚಾರ್‍ಕೋಲ್ ಮಂತಾದವುಗಳನ್ನು ಬಳಸುತ್ತಾರೆ.
  ವಿವಿಧ ರೀತಿಯ ಚಿತ್ರ ಕಲೆಗಾಗಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರೆ  2021ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಯುವಜನೋತ್ಸವ ಪ್ರಶಸ್ತಿ, 2020-21ರಲ್ಲಿ ಬೆಳಗಾವಿಯಲ್ಲಿ ಯುವ ಉತ್ಸವ ಪ್ರಶಸ್ತಿ, 2020ರಲ್ಲಿ ಸಂಕ್ರಾಂತಿ ಚಿತ್ರ ವೈಭವ ಪ್ರಶಸ್ತಿ, 2019-20ರಲ್ಲಿ ನಡೆದ ಹಂಪಿ ಉತ್ಸವ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 2019ರಲ್ಲಿ ರಾಜ್ಯ ಲಲಿತಾ ಕಲಾ ಅಕಾಡೆಮಿಯಿಂದ ಚಿತ್ರಕಲಾ ಕಾರ್ಯಾಗಾರ ಪ್ರಶಸ್ತಿ,2017 ರಿಂದ 2019ರ ವರೆಗೆ ಹಂಪಿ ಉತ್ಸವದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 2019ರ ಕೋವಿಡ್ ಸಮಯದಲ್ಲಿ ಜಾಲತಾಣದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮಸ್ಥಾನ, 2017ರಂದು ತಾಲೂಕು ಮಟ್ಟದ ತೋಟಗಾರಿಕೆ ಇಲಾಖೆ ನಡೆಸಿದ ಚಿತ್ರ ಕಲಾಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,2014ರಲ್ಲಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಚಿತ್ರ ಕಲಾ ಪ್ರಶಸ್ತಿ, 2011ರಲ್ಲಿ ಚಿತ್ರದುರ್ಗಾದಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮಸ್ಥಾನ, 2011ರಲ್ಲಿ ಗುಲ್ಬರ್ಗಾ ವಿಭಾಗ ಮಟ್ಟದ ಚಿತ್ರಕಲಾ ಶೈಕ್ಷಣಿಕ ಮಹಾ ಸಮ್ಮೇಳನ ಪ್ರಶಸ್ತಿ, 2009ರಲ್ಲಿ ಶಿರಸಿಯಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕ್ರಾಫ್ಟ್ ಪ್ರಶಸ್ತಿ. ಬೆಳಗಾವಿಯಲ್ಲಿ ನಡೆದ ಆರ್ಟ್ ಫೆಸ್ಟಿವಲ್ ಸ್ಪರ್ಧೆಯಲ್ಲಿ 20ನೇ ಸ್ಥಾನಪಡೆದು ಆರ್ಟ್ ಬುಕ್‍ನಲ್ಲಿ ಸ್ಥಾನ ಪಡೆದಿದ್ದಾರೆ.
  ನನಗೆ ಚಿತ್ರಕಲೆಯು ರಕ್ತಗತವಾಗಿ ಬಂದಿದ್ದು, ಈ ಕಲೆಗೆ ನನ್ನ ತಾಯಿಯೇ ಪ್ರೇರಣೆಯಾಗಿದ್ದು, ಚಿತ್ರಕಲೆಯಲ್ಲಿ ಬರುವ ಹಲವಾರು ಪ್ರಕಾರಗಳಲ್ಲಿ ಚಿತ್ರಕಲೆಯನ್ನು ರೂಢಿಸಿಕೊಂಡಿದ್ದು, ತಾಲೂಕು ಮಟ್ಟದಿಂದ ರಾಜ್ಯಮಟ್ಟದ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೇನೆ, ಚಿತ್ರಕಲೆಯು ನಿರ್ಸಗದ ಶಿಕ್ಷಣವಾಗಿದೆ, ನನ್ನಲ್ಲಿರುವ ಚಿತ್ರಕಲೆಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಸಿಕೊಡುತ್ತಿದ್ದೇನೆಂದು ಚಿತ್ರಕಲಾಗಾರ್ತಿ ರಶ್ಮಿ ತಿಳಿಸಿದ್ದಾರೆ. 

Attachments area