ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ

ಮಾನ್ವಿ.ಜ.೨೧- ತಾಲೂಕಿನ ಬಾಲಕರ ಪ್ರೌಢ ಶಾಲೆ ಮಾನವಿಯಲ್ಲಿ ನಡೆದ ಪರೀಕ್ಷೆ ಚರ್ಚೆಯ ಚಿತ್ರ ಕಲಾ ಸ್ಫರ್ಧೆಯಲ್ಲಿ ನಮ್ಮ ಬಿ.ವಿ.ಆರ್ ಇ-ಟೆಕ್ನೋ ಶಾಲೆ ಮಾನವಿಯ, ೧೦ ನೇ ತರಗತಿ ವಿದ್ಯಾರ್ಥಿನಿ ಕು.ತೇಜು ಯು.ಶಂಕರ್ ತಂದೆ ಉಮಾಶಂಕರ್ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿದ್ಧಾಳೆ, ಮಕ್ಕಳಿಗೆ ವೃಷಭೇಂದ್ರಯ್ಯ ಡಿ.ಡಿ.ಪಿಐ ರಾಯಚೂರು ಇವರು ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ, ಸಂಸ್ಥೆಯ ಅಧ್ಯಕ್ಷ ಬಿ.ವಿ.ರೆಡ್ಡಿಯವರು, ಕಾರ್ಯದರ್ಶಿ ಬಿ.ಪದ್ಮಾವತಿ ಯವರು ಮುಖ್ಯಗುರು ಖಾನ್ ರವರು, ಚಿತ್ರಕಲಾಶಿಕ್ಷಕ ಅಮ್ಜದ್ ಹುಸೇನ್ ಹಾಗೂ ಶಿಕ್ಷಕವೃಂದ ಹರ್ಷ ವ್ಯಕ್ತ ಪಡಿಸಿದ್ದಾರೆ.