ಚಿತ್ರಕಲಾ ಶಿಕ್ಷಕ ಮಹೇಶ್‌ಗೆ ಸನ್ಮಾನ

ಚಿತ್ರದುರ್ಗ.ಜ.೧: ಚಿತ್ರಕಲಾ ಶಿಕ್ಷಕ ಐ.ಬಿ.ಮಹೇಶ್‌ರವರಿಗೆ ಡಯಟ್ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಮಹೇಶ್‌ರವರು ಪ್ರೌಢಶಾಲಾ ಶಿಕ್ಷಕರಾಗಿ, ಡಯಟ್‌ನಲ್ಲಿ ಸೇವಾಪೂರ್ವ ಶಿಕ್ಷಣ ವಿಭಾಗದಲ್ಲಿ 9 ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಕಳೆದ ಒಂದು ವರ್ಷದಿಂದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿ ಡಿಸೆಂಬರ್ 31  ರಂದು ವಯೋನಿವೃತ್ತಿ ಹೊಂದಿದ ಪ್ರಯುಕ್ತ ಡಯಟ್ ಪ್ರಾಂಶುಪಾಲರಾದ ಎಸ್.ಕೆ.ಬಿ.ಪ್ರಸಾದ್ ಅಭಿನಂದನೆ ಸಲ್ಲಿಸಿದರು. ಉಪನ್ಯಾಸಕರಾದ ಎನ್.ರಾಘವೇಂದ್ರ, ಎಸ್.ಬಸವರಾಜು,  ಕೆ.ಎಂ.ನಾಗರಾಜು, ಎಂ.ಪ್ರಕಾಶ್, ಜಿ.ಎಸ್.ನಾಗರಾಜು, ಕಚೇರಿ ಅಧೀಕ್ಷಕ ಜಿ.ಆರ್.ದೇವೇಂದ್ರಪ್ಪ ಉಪಸ್ಥಿತರಿದ್ದರು.