ಚಿತ್ರಕಲಾ ಕ್ಷೇತ್ರಕ್ಕೆ ರಾಜಾ ರವಿವರ್ಮರ ಕೊಡುಗೆ ಅನನ್ಯ

ಕಲಬುರಗಿ:ಏ.30: ಯಾವುದೇ ಧರ್ಮದ ದೇವತೆಗಳು, ಐತಿಹಾಸಿಕ, ಶೈಕ್ಷಣಿಕ ಕುರುಹುಗಳು, ಸ್ಥಳಗಳು ಸೇರಿದಂತೆ ನಮ್ಮ ದೇಶದ ಬಹುತೇಕ ಪ್ರದೇಶಗಳ ಬಗ್ಗೆ ನೂರಾರು ವರ್ಷಗಳ ಹಿಂದೆಯೇ ಮನೋಜ್ಞವಾಗಿ ಚಿತ್ರಿಸುವ ಮೂಲಕ ಚಿತ್ರಕಲಾ ಕ್ಷೇತ್ರಕ್ಕೆ ರಾಜಾ ರವಿವರ್ಮ ಅವರು ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಡಾ.ಸುಬ್ಬಯ್ಯ ಎಂ.ನೀಲಾ ಹೇಳಿದರು.
ನಗರದ ಮಹಾಲಕ್ಷ್ಮೀ ನಗರದಲ್ಲಿರುವ ‘ನೀಲಾ ಆಟ್ರ್ಸ್ ಸ್ಟುಡಿಯೋ’ದಲ್ಲಿ ‘ನೀಲಾ ಆಟ್ರ್ಸ್’, ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ಇಂಡಿಯನ್ ರಾಯಲ್ ಅಕಾಡೆಮಿ’ಯ ಇವುಗಳ ವತಿಯಿಂದ ಸೋಮವಾರ ಜರುಗಿದ ‘ರಾಜಾ ರವಿವರ್ಮರ ಜನ್ಮದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ,À್ಸಮಾಜ ಸೇವಕ ಲಕ್ಷ್ಮೀಕಾಂತ ತಡಕಲ, ಇಂಡಿಯನ್ ರಾಯಲ್ ಅಕಾಡೆಮಿಯ ಅಧ್ಯಕ್ಷ ಡಾ.ರೆಹಮಾನ್ ಪಟೇಲ್, ಚಿತ್ರ ಕಲಾವಿದ ಸೈಯದ್ ಮುಸ್ತಫಾ, ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕ ಸೈಯದ್ ಹಮೀದ್, ನೀಲಾ ಕುಂಟುಂಬದ ಸದಸ್ಯರು, ಇನ್ನಿತರರು ಪಾಲ್ಗೊಂಡಿದ್ದರು.